ಮಂಡ್ಯ: ಇನ್ನೇನು ವಾರವಷ್ಟೇ ಇದೇ ಎಂದಾಗ ಇಡೀ ರಾಜ್ಯದಲ್ಲಿ ಆಹಾರದ ವಿಚಾರವಾಗಿ ಜೋರು ಚರ್ಚೆಗೆ ಕಾರಣವಾದ್ದು 87ನೇ ಕನ್ನಡ ಸಾಹಿತ್ಯ ಸಮ್ಮೇಳನ. ಆರಂಭವಾಗುವ ಕೊನೆಯ ದಿನದವರೆಗೂ ಬಹುಜನ ಆಹಾರ ಪದ್ಧತಿ ಬೇಕು ಎಂಬ ವಾದದ ನಡುವೆಯೇ ಆರಂಭವಾದ ಸಮ್ಮೇಳನ ಯಶಸ್ವಿಯಾಗಿ ತೆರೆಕಂಡಿತು.
ಮೂರು ದಿನ ಸಕ್ಕರೆ ನಾಡಿನಲ್ಲಿ ಸಾಹಿತ್ಯದ ಸಹಿ ಹರಿದಿದ್ದು. ಈ ಸವಿ ನೆನಪು ವರ್ಷನುಗಟ್ಟಲೆ ಹಾಗೇ ಉಳಿಯಲಿದೆ. ಗಂಡು ಮೆಟ್ಟಿದ ನಾಡು ಎಂದು ಕರೆಸಿಕೊಳ್ಳುವ ನಾಡಿನಲ್ಲಿ ನಡೆದ ಮೂರನೇ ಸಮ್ಮೇಳವೂ ಅಭೂತ ಪೂರ್ವವಾಗಿ ನಡೆಸಿಕೊಟ್ಟದ್ದು ಮಂಡ್ಯ ಜನತೆಯ ಘನತೆಯಾಗಿದೆ.
ಪ್ರಧಾನ ವೇದಿಕೆಯ ಜೊತೆಯಲ್ಲಿ ಎರಡು ಸಮಾಂತರ ವೇದಿಕೆಗಳಲ್ಲಿ ಸಾಹಿತ್ಯ ಗೋಷ್ಠಿಗಳು ಯಶಸ್ವಿಯಾಗಿ ನಡೆದವು. ಮೂರು ದಿನಗಳ ಸಾಹಿತ್ಯ ಸಮ್ಮೇಳದ ವಿಚಾರ ಗೋಷ್ಠಿಯಲ್ಲಿ ನಾಡಿನ ವಿಚಾರಗಳ ಜತೆಯಲ್ಲಿ ಕನ್ನಡ ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಮೇಲೂ ಬೆಳಕು ಚೆಲ್ಲಿದರು.
ಸಮ್ಮೆಳನಾಧ್ಯಕ್ಷರಾದ ಗೊ.ರು. ಚನ್ನಬಸಪ್ಪ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಭಾಷೆ, ಶಿಕ್ಷಣ, ಪರಿಸರ, ಮಹಿಳಾ ಸಬಲೀಕರಣ, ಭಾಷೆ, ಭಾಷೆಯ ಸಮಸ್ಯೆ, ತ್ರಿಭಾಷಾ ಪದ್ಧತಿ ಬಗ್ಗೆ ವಿವರಣಾತ್ಮಕವಾಗಿ ಮಂಡಿಸುದರ ಜೊತೆಯಲ್ಲಿ ಅಮೂಲ್ಯವಾದ 21 ಹಕ್ಕೋತ್ತಾಯಗಳನ್ನು ಸರ್ಕಾರಕ್ಕೆ ಮಂಡಿಸಿದ್ದಾರೆ.
ಮಾಂಸಾಹಾರ:
ಕನ್ನಡ ಮಾತನಾಡುವ ಜನತೆ ಹೆಚ್ಚಿರುವ ಜಿಲ್ಲೆ ಎಂಬ ಖ್ಯಾತಿಯನ್ನು ಹೊಂದಿರುವ ಮಂಡ್ಯದ ನೆಲ ತನ್ನ ಕೀರ್ತಿಯನ್ನು ಈ ಸಮ್ಮೇಳನದ ಮೂಲಕ ಹೆಚ್ಚಿಸಿಕೊಂಡಿತು. ಅಲ್ಲದೇ, ಹೊಸ ವಿಚಾರಗಳಿಗೆ ಮಂಡ್ಯ ಯಾವಾಗಲೂ ಮುಂದು ಎಂಬ ವಾದಕ್ಕೆ ಪುಷ್ಟಿಕೊಡುವಂತೆ ಬಹುಜನ ಬೇಡಿಕೆಯಂತೆ ಮತ್ತು ಬಹುಜನ ಆಹಾರ ಪದ್ಧತಿಯೂ ಇಲ್ಲಿ ಜಾರಿಗೆ ಬಂತು. ಸಮ್ಮೇಳನದ ಕೊನೆಯ ದಿನ ಮಾಂಸಾಹಾರ ನೀಡಿ ಹೊಸ ಹೆಜ್ಜೆ ಇಲ್ಲಿಂದ ಆರಂಭವಾಯಿತು ಎಂತಲೇ ಹೇಳಬಹುದು.
ಜಿಲ್ಲೆಯ ಮೊದಲುಗಳು ಎಂಬ ವಿಚಾರ ಗೋಷ್ಠಿಯಲ್ಲಿ 71 ಮಂಡ್ಯ ಕಾರಣವಾಗಿದೆ ಎಂಬ ಅಂಕಿ-ಅಂಶ ಮಂಡಿಸಲಾಗಿತ್ತು. ಮಾಂಸಾಹಾರ ನೀಡುವ ಮೂಲಕ ಈಗ ಮೊದಲು ಎಂಬ ವಿಚಾರಕ್ಕೆ ಮತ್ತೊಂದು ಸೇರ್ಪಡೆ ಎಂದೇ ಹೇಳಬಹುದು.
ರಾಜ್ಯದ ಮೂಲೆ ಮೂಲೆಯಿಂದ ಹರಿದುಬಂದ ಸಾಹಿತ್ಯಾಸಕ್ತರು: ರಾಜ್ಯದ ಎಲ್ಲಾ ಕಡೆಗಳಿಂದ ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಜನ ಹರಿದು ಬಂದರು. ಸಾಹಿತ್ಯ ಸಾರಿಗೆ ಎಂದು ಮಂಡ್ಯ ಬಸ್ ನಿಲ್ದಾಣದಿಂದ ಸಮ್ಮೇಳನದ ಜಾಗಕ್ಕೆ ವಾಹನ ವ್ಯಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಖಾಸಗಿ ವಾಹನಗಳ ನಿಲುಗಡೆಗೂ ಸಾಕಷ್ಟು ಜಾಗ ಇದ್ದ ಕಾರಣ ಈ ಸಮಸ್ಯೆಯೂ ತಲೆದೂರಲಿಲ್ಲ.
ಮಳೆ ಅಡ್ಡಿ: ಮಳೆಯ ಕಾರಣಕ್ಕಾಗಿಯೇ ದಿನಾಂಕಗಳನ್ನು ಮುಂದೂಡಿ ಡಿಸೆಂಬರ್ನಲ್ಲಿ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಆದರೆ ಎರಡನೇ ದಿನವಾದ ಶನಿವಾರ ಸಂಜೆ (21-12-2024) 6 ರಿಂದ 7ರ ವರೆಗೆ ಮಳೆ ಬಂತು. ಸ್ವಲ್ಪ ಸಮಯ ಸಮಯ ಸಾಹಿತ್ಯಾಸಕ್ತರ ಗೊಂದಲಕ್ಕೆ ಇದು ಕಾರಣವಾಯಿತು. ಆದರೆ ವ್ಯವಸ್ಥೆ ಸುಸಚ್ಚಿತವಾಗಿದ್ದ ಕಾರಣ ಹೆಚ್ಚಿನ ಸಮಸ್ಯೆ ಆಗಲಿಲ್ಲ.
ಬಳ್ಳಾರಿಗೆ 88ನೇ ಸಮ್ಮೇಳನ: ಮುಂದಿನ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಡಿನಾಡು ಬಳ್ಳಾರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಶನಿವಾರ ರಾತ್ರಿ ಖಾಸಗಿ ಹೋಟೆಲ್ನಲ್ಲಿ ಜರುಗಿದ ಎಲ್ಲ ಜಿಲ್ಲೆಗಳ ಕಸಾಪ ಪ್ರತಿನಿಧಿಗಳ ಸಭೆಯಲ್ಲಿ ಗಡಿನಾಡು ಬಳ್ಳಾರಿಯಲ್ಲಿ ಮುಂದಿನ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಸರ್ವಾನುಮತದಿಂದ ನಿರ್ಣಯಿಸಲಾಯಿತು.
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...
©2024 Book Brahma Private Limited.