ಶಿಕ್ಷಕರು ಎಂದರೆ ಹಿಂದೆ ಒಂದು ಘನತೆ, ಗೌರವವಿತ್ತು. ಮಕ್ಕಳ ಭವಿಷ್ಯ ಕುರಿತು ಚಿಂತಿಸುವಾಗ ಅಲ್ಲಿ ಶಿಕ್ಷಕ ಭರವಸೆಯ ಬೆಳಕಾಗುತ್ತಾನೆ. ಆದರೆ ಶಿಕ್ಷಣ ವ್ಯಾಪಾರೀಕರಣವಾಗುತ್ತಿರುವ ಕಾಲದಲ್ಲಿ ಶಿಕ್ಷಕನೂ ವ್ಯಾಪಾರದ ಭಾಗವಾಗುತ್ತಿದ್ದಾನೆ.ಹಾಗಿದ್ದರೂ ನಮ್ಮ ಸಮಾಜ ಶಿಕ್ಷಕನ ಜವಾಬ್ದಾರಿಗಳನ್ನು, ಮೌಲ್ಯಗಳನ್ನು ಮರೆತಿಲ್ಲ. ಏಕೆಂದರೆ ಆತ ‘ನಾಳಿನ ಯಶಸ್ವೀ ಪ್ರಜೆಗಳ ರೂವಾರಿ’. ಮಕ್ಕಳ ಬದುಕನ್ನು ಮೌಲ್ಯಯುತವಾಗಿ ಕಟ್ಟಿಕೊಡುವ ಬಹುದೊಡ್ಡ ಜವಾಬ್ದಾರಿ ಶಿಕ್ಷಕನದ್ದಾಗಿರುತ್ತದೆ. ಹಾಗಾದರೆ ಯಶಸ್ವೀ ಶಿಕ್ಷಕರಾಗಲು ಏನು ಮಾಡಬೇಕು ಎಂಬುದನ್ನು ಶಿಕ್ಷಕ, ಚಿಂತಕ ಅರವಿಂದ ಚೊಕ್ಕಾಡಿ ಈ ಪುಸ್ತಕದಲ್ಲಿ ತಿಳಿಸಿದ್ದಾರೆ.
©2025 Book Brahma Private Limited.