ವಿಜ್ಞಾನವು ವಿಚಾರಗಳನ್ನು ಸಮರ್ಥಿಸಲು ಖಚಿತ ಮಾನದಂಡಗಳನ್ನು ಇಟ್ಟುಕೊಂಡಿರುತ್ತದೆ. ಇದು ವಿಜ್ಞಾನದ ವಿಶಿಷ್ಟ ಗುಣ. ವಿಜ್ಞಾನದ ಗ್ರಹಿಕೆಗಳು ಪ್ರಯೋಗ ಮತ್ತು ಪ್ರಮಾಣೀಕರಿಸಿದ ಸೂತ್ರಕ್ಕೆ ಒಳಪಟ್ಟಿರುತ್ತದೆ. ಹೊಸ ಪ್ರಯೋಗದಿಂದ ಹಿಂದಿನ ಫಲಿತಾಂಶ ಸರಿಯಿಲ್ಲವೆಂದು ಸಾಬೀತಾದಾಗ ಹಳೆಯದನ್ನು ಕೈಬಿಟ್ಟು ಹೊಸತನ್ನು ಸ್ಥಾಪಿಸುವುದು ವಿಜ್ಞಾನದ ಪದ್ಧತಿ. ಇದೇ ರೀತಿ ಜೀವನ ವಿಜ್ಞಾನ ಸಹ ಶಿಕ್ಷಣದ ವಿಷಯ ಬಂದಾಗ ಅದು ವೈಜ್ಞಾನಿಕವಾಗಿರಬೇಕಾದದ್ದು ಅನಿವಾರ್ಯ. ಯಾಕೆಂದರೆ ಕಲಿಸುವ ವಿಚಾರಗಳು ಎಲ್ಲರ ಅನುಭವಕ್ಕೂ ಸಿಗುವ, ತಾರ್ಕಿಕವಾಗಿ ಸರಿ ಇರುವ, ಪ್ರಮಾಣೀಕರಣಕ್ಕೆ ಒಳಪಡುವ ಸಂಗತಿಗಳಾಗಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಲೇಖಕರು ಡಿ.ಎಸ್.ಇ.ಆರ್.ಟಿ. ನಿಗದಿಪಡಿಸಿರುವ ಕೆಲವು ಸೂತ್ರಗಳನ್ನು ಅನುಸರಿಸಿ ಪುಸ್ತಕವನ್ನು ರಚಿಸಿದ್ದಾರೆ.
©2025 Book Brahma Private Limited.