ಒಕ್ಕೂಟವ್ಯವಸ್ಥೆಯಲ್ಲಿ ನಾವು ಏಕಾಂಗಿಯಾಗಿ ಬದುಕಲಾರೆವಾದ್ದರಿಂದ ಜಾಗತಿಕ ವ್ಯಾಪಾರ ಸಂಬಂಧಗಳು ನಮಗೆ ಅನಿವಾರ್ಯ. ಆದರೆ ಅದರ ಪರಿಣಾಮವಾಗಿ ಬಹುಪಾಲು ಸಣ್ಣ ಮತ್ತು ಅತಿಸಣ್ಣ ರೈತರನ್ನು ಹೊಂದಿರುವ ಭಾರತೀಯ ಕೃಷಿರಂಗ ಈಗತಾನೆ ಜೀವನಧಾರ ಕೃಷಿಯಿಂದ ವಾಣಿಜ್ಯ ಕೃಷಿಗೆ ಪ್ರವೇಶಿಸುತ್ತಿದೆ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಮತ್ತು ಬೆಲೆಯಲ್ಲಿ ಸ್ಪರ್ಧಾತ್ಮಕವಾಗಿರುವಂತಹ ಕೃಷಿ ಉತ್ಪನ್ನಗಳನ್ನು ಭಾರತೀಯ ರೈತರಿಂದ ನಿರೀಕ್ಷಿಸಲಾಗುತ್ತಿದೆ.
ಆದರೆ ಸಮರ್ಪಕ ಸಂರಕ್ಷಣೆಯ ಅಂಶಗಳಿಲ್ಲದೆ ಕೈಗಾರಿಕಾ ರಾಷ್ಟ್ರಗಳ ಸ್ಥಾಪಿತ ವಾಣಿಜ್ಯಕೃಷಿಯ ಎದುರು ಭಾರತ ಸ್ಪರ್ಧಿಸಲು ಸಾಧ್ಯವೆ? ಈ ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಆತನಿಗೆ ಸಮಾನ ಸ್ಥಾನ ದೊರೆಯುವುದೇ ಎಂಬ ಅಂಶಗಳನ್ನು ಕೃತಿಯಲ್ಲಿ ಚರ್ಚಿಸಲಾಗಿದೆ.
©2024 Book Brahma Private Limited.