ಉತ್ತರ ಕರ್ನಾಟಕದ ಜಾನಪದೀಯ ನಾಟಕಗಳಾದ ಬಯಲಾಟ ಹಾಗೂ ಸಣ್ಣಾಟಗಳು ಅಂದು ಕೇವಲ ಮನರಂಜನೆಗೆ ಮಾತ್ರವಲ್ಲ; ಜನಮಾನಸದಲ್ಲಿ ಜೀವನ ಸಂದೇಶ ಸಾರುವುದೂ ಅವುಗಳ ಉದ್ದೇಶವಾಗಿತ್ತು. ಅವುಗಳ ವಿಷಯ ವಸ್ತು, ಪಾತ್ರಗಳು, ಸಂಭಾಷಣೆಗಳು, ವಸ್ತಾಭರಣಗಳು, ಪ್ರಸಾದನ ಎಲ್ಲವೂ ಗ್ರಾಮೀಣ ಸೊಗಡಿನ ಭಾಗವಾಗಿಯೇ ಇದ್ದವು. ಈ ನಾಟಕಗಳನ್ನು ವಿಶೇಷವಾಗಿ ಜಪಾನ್ ಹಾಗೂ ಅಮೆರಿಕದ ರಂಗ ಪರಿಣಿತರು ಪ್ರಶಂಸಿಸಿದ್ದಾರೆ.
ದಿ. ಫೋಕ್ ಥಿಯೇಟರ್ ಆಫ್ ನಾರ್ತ್ ಕರ್ನಾಟಕ -ಶೀರ್ಷಿಕೆಯಡಿ ಕನ್ನಡದ ವಿಶೇಷವಾಗಿ ಉತ್ತರ ಕರ್ನಾಟಕದ ರಂಗ ಕಲೆಗಳ ಕುರಿತು ಇಂಗ್ಲಿಷ್ ಭಾಷೆಯಲ್ಲಿ ಬರೆದಿದ್ದು, ಈ ಕಲೆಗಳಿಗೆ ಅಂತಾ ರಾಷ್ಟ್ರೀಯ ಮಾನ್ಯತೆ ದೊರೆಯುವಂತೆ ಮಾಡಿದ್ದು ಲೇಖಕರ ಕಳಕಳಿ ಶ್ಲಾಘನೀಯ.
©2024 Book Brahma Private Limited.