‘ಬಯಲಾಟಗಳಿಗೆ ಬಳ್ಳಾರಿ ಜಿಲ್ಲೆಯ ಮಹಿಳೆಯರ ಕೊಡುಗೆ’ ಅಂಜನಾ ಕೃಷ್ಣಪ್ಪ ಅವರ ಕೃತಿ. ಕರ್ನಾಟಕ ಜನಪದ ರಂಗಭೂಮಿ ಕಲೆಯಲ್ಲಿ ಪ್ರಮುಖವಾದುದು ಬಯಲಾಟ ಕಲೆ. ಬಳ್ಳಾರಿ ಜಿಲ್ಲೆ ಬಯಲಾಟ ಕಲೆಗೆ ನೀಡಿರುವ ಕೊಡುಗೆ ಅವಿಸ್ಮರಣೀಯ. ಹೆಣ್ಣು ಮಕ್ಕಳು ಮುಖಕ್ಕೆ ಬಣ್ಣ ಬಳಿದುಕೊಂಡು ಪಾತ್ರ ಮಾಡುವುದು, ಹಾಡುವುದು, ಕುಣಿಯುವುದು ಆ ಕಾಲದಲ್ಲಿ ಅತ್ಯಂತ ಮುಜುಗರದ ವಿದ್ಯಮಾನ. ಆದರೂ ಆ ಖಾಲದಲ್ಲಿ ಕುರುಗೋಡಿನ ಬಂಗಾರಿ ದೊಡ್ಡಮ್ಮ, ಹೂವಿನಡಗಲಿಯ ದೊಡ್ಡ ಬಸಮ್ಮ, ಕಮಲಮ್ಮ, ಸೋಗಿಯ ನಾಗರತ್ನ, ಪಾತ್ರದ ಗೌರಮ್ಮ ಮುಂತಾದ ಕಲಾವಿದೆಯರು ರಂಗಭೂಮಿಯನ್ನು ವೃತ್ತಿಯಾಗಿ ಸ್ವೀಕರಿಸಿ ರಂಗಭೂಮಿಗೆ ವಿಶೇಷ ಮೆರಗನ್ನು ತಂದು ಕೊಟ್ಟಿದ್ದಾರೆ. ನೋವನ್ನು ನುಂಗಿ ಪ್ರೇಕ್ಷಕರನ್ನು ನಗಿಸಿದ್ದಾರೆ, ಸಾಮಾಜಿಕ ಶಿಕ್ಷಣವನ್ನು ನೀಡಿದ್ದಾರೆ. ಅಂತಹ ಮಹಿಳಾ ಕಲಾವಿದರ ಕುರಿತು ಅಂಜನಾ ಕೃಷ್ಣಪ್ಪ ಅವರು ಈ ಕೃತಿಯನ್ನು ರಚಿಸಿದ್ದಾರೆ.
©2025 Book Brahma Private Limited.