ಕನ್ನಡ ರಂಗಪರಂಪರೆಯ ಆಗ್ರಗಣ್ಯ ನಾಟಕಕಾರ ಮತ್ತು ಸಂಸ್ಕೃತ ವಿದ್ವಾಂಸ ಶ್ರೀರಂಗಾಚಾರ್ಯ ಜೀವನ ಮತ್ತು ಸಾದನೆಗಳನ್ನು ಹಂತ ಹಂತವಾಗಿ ವಿವರಿಸಲಾಗಿದೆ.ನಾಡಿನ ವಿವಿಧ ಹೆಸರಾಂತ ಸಾಹಿತಿಗಳು, ವಿಮರ್ಶಕರು ಶ್ರೀರಂಗರ ಬದುಕು ಮತ್ತು ಬರವಣಿಗೆಯನ್ನು ತನ್ನ ನೇರ ಅನುಭವದ ಮೂಲಕ ವಿವರಿಸಿದ್ದಾರೆ. ಮೂರು ಭಾಗಗಳಲ್ಲಿ ಈ ಕೃತಿ ರೂಪುಗೊಂಡಿದ್ದು, ಮೊದಲ ಭಾಗದಲ್ಲಿ ಶ್ರೀರಂಗರ ಕೃತಿಗಳ ಪರಿಚಯ ಮತ್ತು ವಿಮರ್ಶಿಸುವ ಕೆಲಸ ನಡೆದಿದೆ. ಜಿ.ಎಸ್. ಅಮೂರ, ಸ.ಸ.ಮಾಳವಾಡ, ವಿ.ಎಂ.ಇನಾಂದಾರ್, ಗಿರಡ್ಡಿ ಗೋವಿಂದರಾಜ, ಗಿರೀಶ ಕಾರ್ನಾಡ, ವಿ.ಸೀತಾರಾಮಯ್ಯ, ರಂ.ಶ್ರೀ.ಮುಗಳಿ, ಟಿ.ಪಿ.ಆಶೋಕ, ಎಸ್.ಎಲ್.ಭೈರಪ್ಪ, ಅ.ರಾ.ಮಿತ್ರ ಮತ್ತಿತರರು ಶ್ರೀರಂಗರ ಕೃತಿಗಳನ್ನು ನೋಡಲು ಕೈಮರವಾಗಿದ್ದಾರೆ. - ಇನ್ನು ಎರಡನೇ ಭಾಗದಲ್ಲಿ ವ್ಯಕ್ತಿಯಾಗಿ ಶ್ರೀರಂಗರು ಹೇಗೆ, ಅವರ ಸಾಧನೆ ಏನು ಎಂಬುದನ್ನು ನೆಗಳೂರು ರಂಗನಾಥ, ಪ್ರಸನ್ನ, ನಾರಾಯಣ ರಾಯಚೂರ್, ಶಶಿ ದೇಶಪಾಂಡೆ, ಸಿದ್ದಲಿಂಗ ಪಟ್ಟಣಶೆಟ್ಟಿ ಮತ್ತಿತರ ಲೇಖಕರು ಪರಿಚಯಿಸಿದ್ದಾರೆ. ಮೂರನೇ ಭಾಗದಲ್ಲಿ ಶ್ರೀರಂಗರೊಂದಿಗಿನ ಸಂದರ್ಶನ ಮತ್ತು ಅವರಿಗೆ ಸಂಬಂಧಿಸಿದ ಬರಹಗಳಿವೆ. ಡಾ.ವಿಜಯಾ, ಎಚ್.ಎಸ್. ಪಾರ್ವತಿ, ಎಚ್ಚೆಸ್ಕೆ, ವೈಕುಂಠ ರಾಜು, ಬಿ.ವಿ.ಕಾರಂತರ ಬರಹಗಳಿವೆ. ಮತ್ತು ಇದೇ ವಿಭಾಗದಲ್ಲಿ ಶ್ರೀರಂಗರ ಬಿಡಿಬಿಡಿ ಬರಹಗಳನ್ನೂ ದಾಖಲಿಸಲಾಗಿದೆ.
©2025 Book Brahma Private Limited.