ಕೇವಲ ಐದು ಸಾವಿರ ಕುಟುಂಬಗಳು ಇರುವ ಒಂದು ಪುಟ್ಟ ಸಮುದಾಯ ಸಂಕೇತಿಗಳದ್ದು. ಐದಾರು ದಶಕಗಳ ಹಿಂದೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಂಕೇತಿಗಳು ಈಗ ಕಾಲದ ಹೊಡೆತಕ್ಕೆ ಸಿಲುಕಿದ್ದಾರೆ ಎಂಬ ಮಾತುಗಳಿವೆ. ಸಂಕೇತಿಗಳ ಅನನ್ಯತೆಯನ್ನು ಸಾರುತ್ತಿರುವುದು ಅವರ ಭಾಷೆ. ಲಿಪಿ ಇಲ್ಲದಿದ್ದರೂ ಈ ಭಾಷೆಗೆ ತನ್ನದೇ ಆದ ಮಹತ್ವವಿದೆ.
ಇಂತಹ ಸಂಕೇತಿ ಸಮುದಾಯದ ಜನಪದ ಕತೆಗಳ ಸಂಗ್ರಹ ’ಸಂಕಥಾ’. ಅರಕಲಗೂಡು ಮತ್ತು ಹೊಳೆನರಸೀಪುರ ತಾಲೂಕಿಗೆ ಸೇರಿದ ಆರು ಮಂದಿ ಜನಪದ ಕತೆಗಾರರು ಹೇಳಿದ ಕತೆಗಳನ್ನು ಇಲ್ಲಿ ದಾಖಲಿಸಲಾಗಿದೆ. ಒಟ್ಟು ೫೨ ಕತೆಗಳನ್ನು ಸಂಗ್ರಹಿಸಿ ನೀಡಲಾಗಿದ್ದು ಸಂಪಾದಕರ ಸಾರ್ಥಕ ಶ್ರಮ ಕೃತಿಯಲ್ಲಿ ಎದ್ದು ಕಾಣುತ್ತದೆ.
©2025 Book Brahma Private Limited.