ಕವಿ -ನಾಟಕಕಾರ ಕಂಬಾರರು ಜಾನಪದ ತಜ್ಞರು ಕೂಡ. ಕಂಬಾರರು ಮಕ್ಕಳಿಗಾಗಿ ಹೇಳಿದ ಜನಪದ ಕಥೆಗಳು ಈ ಸಂಕಲನದಲ್ಲಿವೆ. ಜಾನಪದ ಒಂದು ಸಂಸ್ಕೃತಿಯು ಮುಗಿದು ಪೂರ್ತಿಯಾದ ಅವಸ್ಥೆಯಲ್ಲ. ಅದು ಸದಾ ಕಾಲ ಜೀವಂತವಾಗಿರುವಂತಹದ್ದು. ಒಬ್ಬ ಜನಪದ ಕಲಾವಿದ ಹಾಡು ಹೇಳುತ್ತಿದ್ದಾನೆಂದರೆ ಏಕಕಾಲದಲ್ಲಿ ಆತ ಎರಡು ಕೆಲಸ ಮಾಡುತ್ತಿರುತ್ತಾನೆ. ಹಾಡುತ್ತಾ ಹಾಡಿನ ಪರಂಪರೆಯನ್ನು ಉಳಿಸುವ ಜೊತೆಗೆ ಹಿಂದಿನವರ ಹೊಸ ಅಂಶಗಳನ್ನು ಸೃಷ್ಟಿಸುವ ಕೆಲಸ ಮಾಡುತ್ತಾನೆ. ಜಾನಪದ ಕಥೆ ಎಂದರೆ ಅವು ರಂಗದ ಮೇಲೆ ಬರುವಂಥವು. ಕಾವ್ಯ ಎಂದರೆ ಹಾಡುವುದೇ ಎಂದು ತಿಳಿದು ತಾವು ಸೃಷ್ಟಿಸಿದ್ದನ್ನು ಜೀವಂತ ಸ್ವರೂಪದಲ್ಲಿಡಲು ಕಂಬಾರರು ನಿರಂತರವಾಗಿ ಪ್ರಯತ್ನಿಸಿದವರು. ಹೀಗೆ ಜಾನಪದ ಮೂಲ ಸಂಗತಿಗಳನ್ನು ತಮ್ಮ ಮನೋವಲಯಕ್ಕೆ ತಂದುಕೊಂಡು ಅದಕ್ಕೆ ಬೇರೆಯದೇ ರೂಪ ಕೊಟ್ಟು, ಅದನ್ನು ಕೇಳುಗರು ಮತ್ತು ಪ್ರೇಕ್ಷಕ ವರ್ಗದ ಮುಂದೆ ಇಟ್ಟವರಲ್ಲಿ ಕಂಬಾರರು ಪ್ರಮುಖರು. ಮಕ್ಕಳಿಗಾಗಿಯೇ ಕಂಬಾರರು ವಿಶೇಷವಾಗಿ ರಚಿಸಿರುವ ಹದಿಮೂರು ಜನಪದ ಕಥೆಗಳು ಈ ಸಂಕಲನದಲ್ಲಿವೆ.
©2024 Book Brahma Private Limited.