ಲೇಖಕ ಚನ್ನಪ್ಪ ಕಟ್ಟಿ ಅವರ ಕೃತಿ ಚೆನ್ನುಡಿ. ಲೇಖಕ ಡಾ. ಬಸವರಾಜ ಡೋಣೂರ ಅವರು ಈ ಖೃತಿಯಲ್ಲಿ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ' ಚೆನ್ನುಡಿ ' ಕಟ್ಟಿಯವರು ಇಲ್ಲಿಯವರೆಗೆ ಬೇರೆ ಬೇರೆ ಲೇಖಕರ ಕೃತಿಗಳಿಗೆ ಬರೆದ ಮುನ್ನುಡಿ ಮತ್ತು ಬೆನ್ನುಡಿಗಳ ಸಂಗ್ರಹ. ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಛಾಪು ಮೂಡಿಸಿದ ಹಿರಿಯ ಲೇಖಕರ ಕೃತಿಗಳಿಗೆ ಬರೆದ ಮುನ್ನುಡಿಗಳು ಮತ್ತು ಸಾಹಿತ್ಯ ಪ್ರಪಂಚದಲ್ಲಿ ಚಿಕ್ಕ ಚಿಕ್ಕ ಹೆಜ್ಜೆಗಳನ್ನು ಮೂಡಿಸುತ್ತ, ತಮ್ಮ ಭಾವನೆ, ಅರಿವು, ವಿಚಾರ ಮತ್ತು ಅಭಿವ್ಯಕ್ತಿ ಕ್ರಿಯಾಶೀಲಗೊಳಿಸುತ್ತ ತಮ್ಮ ಬರಹದ ವ್ಯಕ್ತಿತ್ವ ಗಟ್ಟಿಗೊಳಿಸಲು ಪ್ರಯತ್ನಿಸುವ ಯುವ ಲೇಖಕರ ಕೃತಿಗಳಿಗೆ ಬರೆದ ಮುನ್ನುಡಿಗಳೂ ಇಲ್ಲಿ ಸಂಗ್ರಹಗೊಂಡಿವೆ. ಸಾಹಿತ್ಯ ಪ್ರೀತಿ, ಜೀವನ ಪ್ರೀತಿ, ಮನುಷ್ಯ ಜೀವನದ ಅಸಂಖ್ಯಾತ ಚಹರೆಗಳ, ಮಜಲುಗಳ ಸೂಕ್ಷ್ಮ ಅವಲೋಕನ ಕಟ್ಟಿಯವರ ಬರಹದಲ್ಲಿ ಕಾಣಿಸುತ್ತದೆ. ತಮ್ಮ ಸಮಕಾಲೀನ ಲೇಖಕರ ಬಗ್ಗೆ, ತಮ್ಮ ಶಿಷ್ಯರ ಮತ್ತು ವಿದ್ಯಾರ್ಥಿಗಳ ಬಗ್ಗೆ ಹಿರಿಯ ಲೇಖಕ ಎಂಥ ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.