ವನ್ಯಜೀವಿಗಳ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಅವುಗಳ ಅಳಿವಿನ ಬಗ್ಗೆ ಕಾಲಜಿ ವ್ಯಕ್ತ ಪಡಿಸುತ್ತಾರೆ. ಆದರೆ ಅವುಗಳ ರಕ್ಷಣೆಗಾಗಿ ಯಾರೂ ಶ್ರಮಿಸುವುದಿಲ್ಲ. ಇದೇ ಆಶಯದಲ್ಲಿ ಸಾಹಿತಿ ಗಿರಿಮನೆ ಶ್ಯಾಮರಾವ್ ‘ಒಂದು ಆನೆಯ ಸುತ್ತ’ ಕಾದಂಬರಿಯಲ್ಲಿ ಆನೆಯಂತಹ ದೈತ್ಯ ಜೀವಿಯ ಬಗ್ಗೆ ಅರಿವು ಮೂಡಿಸುವ ವಿನೂತನ ಪ್ರಯತ್ನ ಮಡಿದ್ದಾರೆ. ಮಲೆನಾಡಿನ ದಟ್ಟ ಕಾಡುಗಳ ಅಂಚಿನಲ್ಲಿರುವ ಕೆಲವು ಊರುಗಳಿಗೆ ಆನೆಗಳು ನುಗ್ಗಿ ಆಸ್ತಿ, ಬೆಳೆ, ಜೀವ ಹಾನಿಗಳನ್ನು ಮಾಡುತ್ತಿದೆ ಎಂದು ಜನರು ಆಕ್ರೋಸ ವ್ಯಕ್ತ ಪಡಿಸುವುದು ಸಹಜ. ಆದರೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ವನ್ಯಜೀವಿಗಳ ಹರಣ ಮಾಡುತ್ತಾನೆ. ಪಶ್ಚಿಮ ಘಟ್ಟದ ಸ್ವಚ್ಛಂದ ಕಾಡುಗಳಲ್ಲಿ ಇಂದು ಗಾಂಜಾದಂತಹ ಬೆಳೆಗಳು ಹುಲುಸಾಗಿ ಬೇಳೆಯುವಂತೆ ಮನುಷ್ಯ ಮಡಿಕೊಂಡಿದ್ದಾನೆ. ಹೀಗಾಗಿ ಆನೆಗಳಂತಹ ಪ್ರಾಣಿಗಳು ಆಹಾರ ನೆಲೆ ಹುಡುಕಿಕೊಂಡು ಊರೊಳಗೆ ನುಗ್ಗತ್ತವೆ. ಆದರೆ ಜನ, ನಮ್ಮ ಘನ ಸರ್ಕಾರಗಳು ಈ ಪ್ರಾಣಿಗಳನ್ನೇ ಕೊಲ್ಲುವ ಮಟ್ಟಕ್ಕೆ ಹೋಗುತ್ತಾರೆ. ಇಂತಹ ಹ¯ವಾರು ಚಿಂತನಾದಾಯಕ ವಿಷಯಗಳ ಸುತ್ತಾ ಲೇಖಕರು ಕಥೆಯನ್ನು ಪೋಣಿಸಿಕೊಂಡು ಹೋಗಿದ್ದಾರೆ. ಕಾದಂಬರಿಯ ನಡುವಲ್ಲಿ ಇಂತಹ ಪ್ರಾನಿಗಳ ರಕ್ಷಣೆಗೆ ಮುಂದಾಗುವ ಕೆಲವಾ ಜನರನ್ನು ನಮ್ಮ ಸಮಾಜ ಹೇಗೆ ನೋಡುತ್ತದೆ ಎಂಬುದನ್ನು ಲೇಖಕರು ಅತ್ಯಂತ ಅಚ್ಚುಕಟ್ಟಾಗಿ ಮನಕಲಕುವಂತೆ ವಿವರಿಸಿದ್ದಾರೆ. ಮಧ್ಯದಲ್ಲಿ ಪ್ರಾಣಿ ಪ್ರೇಮಿಗಳಾದ ಬಿಂದು ಎಂಬ ಹುಡುಗಿ ಹಾಗೂ ಸಾಹಿತಿಯೊರ್ವನ ನಡುವಿನ ಪ್ರೇಮ ಕಥೆ ಕಾದಂಬರಿಗೆ ಮತ್ತಷ್ಟು ಮೆರುಗು ತಂದಿದೆ.
©2024 Book Brahma Private Limited.