ಚಿಂತಕ ಹಾಗೂ ಸಾಹಿತಿ ರಾಮೇಗೌಡ (ರಾಗೌ) ಅವರು ಬರೆದ ಕೃತಿ-ನಮ್ಮ ಗಾದೆಗಳು ಮತ್ತು ನಮ್ಮ ಒಗಟುಗಳು. ‘ಗಾದೆ’ ಮತ್ತು ‘ಒಗಟು-ಈ ಎರಡೂ ಪ್ರಕಾರಗಳ ರೂಪರಚನೆಯಲ್ಲಿ ಹಲವು ಹೋಲಿಕೆಗಳಿರುವಂತೆ ವ್ಯತ್ಯಾಸಗಳೂ ಇವೆ. ಗಾದೆಗಳು ವ್ಯಾಖ್ಯಾನಪೇಕ್ಷೆವಾದವು; ಒಗಟುಗಳು ಉತ್ತರಾಪೇಕ್ಷೆವಾದವು. ಗಾದೆಗಳ ವ್ಯಾಪ್ತಿ ದೊಡ್ಡದು; ಒಗಟುಗಳು ಮನರಂಜನಾ ಲಕ್ಷಣ ಹೊಂದಿರುತ್ತವೆ. ಜನಪದ ಸಾಹಿತ್ಯದ ‘ಭಾವ’ ಮತ್ತು ‘ಬುದ್ಧಿ’ಯ ಕ್ಷೇತ್ರವನ್ನು ತುಂಬಿಕೊಳ್ಳುವ ಈ ಪ್ರಕಾರಗಳು ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಭಾಷಿಕ ಅಧ್ಯಯನಗಳಿಗೆ ಘನವಾದ ವಸ್ತುವನ್ನು ಒದಗಿಸಿ ಕೊಡುತ್ತವೆ. ಜನಪದ ಸಂಸ್ಕೃತಿಯ ‘ಅರಿವು’ ಮತ್ತು ‘ಸಂಶೋಧನೆ’ಗೆ ಈ ಗ್ರಂಥವು ಒಂದು ಉತ್ತಮ ಆಕರ ಗ್ರಂಥವಾಗಲಿದೆ.
©2024 Book Brahma Private Limited.