ಪತ್ರಕರ್ತ ಹಾಗೂ ಲೇಖಕ ಅಂಶಿ ಪ್ರಸನ್ನಕುಮಾರ ಅವರ ಕೃತಿ-ಮೈಸೂರು ಸುತ್ತಮುತ್ತ ನೂರೊಂದು ಪ್ರವಾಸಿ ತಾಣಗಳು. ಮೈಸೂರು ಕೇವಲ ಐತಿಹಾಸಿಕ ನಗರ ಮಾತ್ರವಲ್ಲ; ಅದು ಸಾಂಸ್ಕೃತಿಕ ನಗರವೂ ಹೌದು. ಆದ್ದರಿಂದ, ನಗರಗಳ ಇತಿಹಾಸದಲ್ಲಿ ಮೈಸೂರಿಗೆ ತನ್ನದೇ ಆದ ವಿಶಿಷ್ಟ ಸ್ಥಾನವುಂಟು. ಹವಾಮಾನ-ಹಸಿರು ಪರಿಸರದ ದೃಷ್ಟಿಯಿಂದಲೂ ಮೈಸೂರು ಜನರ ಗಮನ ಸೆಳೆಯುತ್ತಲೇ ಬಂದಿದೆ. ಟಿಪ್ಪುಸುಲ್ತಾನನ ಆಳ್ವಿಕೆ, ಬ್ರಿಟಿಷರ ವಿರುದ್ಧದ ಆತನ ಹೋರಾಟ, ತದನಂತರ, ಅರಸು ಮನೆತನಗಳ ಅಭಿವೃದ್ಧಿ ಕಾರ್ಯಗಳು, ಐಇತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಿಕೊಂಡು ಬಂದ ಕಳಕಳಿ, ನೈಸರ್ಗಿಕ ತಾಣಗಳ ಅಭಿವೃದ್ಧಿ ಇತ್ಯಾದಿ ಹತ್ತು ಹಲವು ಅಂಶಗಳು ಮೈಸೂರು ಸುತ್ತಮುತ್ತ ತನ್ನದೇ ಆದ ಸಿರಿವಂತಿಕೆಯಿಂದ ಮೆರೆಯುತ್ತಿದೆ. ಮೈಸೂರು ದಸರಾ, ಚಾಮುಂಡೇಶ್ವರಿ ಬೆಟ್ಟ, ಕನ್ನಂಬಾಡಿ ಆಣೆಕಟ್ಟು, ಚರ್ಚುಗಳು, ಜಲಪಾತಗಳು ಹೀಗೆ ನೋಡುಗರ ಕಣ್ಮನ ಸೆಳೆಯುತ್ತವೆ. ಈ ಎಲ್ಲ ಆಕರ್ಷಣೆಗಳನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟ ಕೃತಿ ಇದು.
©2024 Book Brahma Private Limited.