ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ ಯೋಜನೆಯ ಹನ್ನೆರಡನೇ ಕೃತಿಯಿದು. ಕನ್ನಡಕ್ಕೆ ಕನ್ನಡದ್ದೇ ಆದ ಸಾಹಿತ್ಯ ಮೀಮಾಂಸೆ ಇದೆ. ಅದು ಸಂಸ್ಕೃತದ ಮತ್ತು ಪಾಶ್ಚಿಮಾತ್ಯ ಮೀಮಾಂಸೆಗಿಂತ ಭಿನ್ನ. ಅದನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕನ್ನಡದ ಪ್ರಮುಖ ಲೇಖಕರು ಬರೆದಿರುವ ಲೇಖನಗಳನ್ನು ಒಳಗೊಂಡಿರುವ ಸಂಕಲನವಿದು. ಕನ್ನಡ ಸಾಹಿತ್ಯ ಮೀಮಾಂಸೆಯ ಮೊದಲ ಸಂಪುಟ. ರಹಮತ್ ತರೀಕೆರೆ ಅವರು ಇದನ್ನು ಸಂಪಾದಿಸಿ, ಪ್ರಕಟಿಸಿದ್ದಾರೆ. ಬಿ.ಎಂ. ಶ್ರೀಕಂಠಯ್ಯ, ದ.ರಾ.ಬೇಂದ್ರೆ, ಸೇಡಿಯಾಪು ಕೃಷ್ಣಭಟ್ಟ, ಕುವೆಂಪು, ಮಾಸ್ತಿ, ಅನಕೃ, ಪುತಿನ, ಕೀರ್ತಿನಾಥ ಕುರ್ತಕೋಟಿ, ಯು.ಆರ್. ಅನಂತಮೂರ್ತಿ, ಗೋಪಾಲಕೃಷ್ಣ ಅಡಿಗ, ಜಿ.ಎಸ್. ಶಿವರುದ್ರಪ್ಪ, ಪೂರ್ಣಚಂದ್ರ ತೇಜಸ್ವಿ, ಎಚ್.ಎಂ. ಚನ್ನಯ್ಯ, ದೇವನೂರ ಮಹಾದೇವ, ಜಿ.ಎಚ್. ನಾಯಕ, ಎಸ್.ಎಲ್. ಭೈರಪ್ಪ, ಬಿ.ಕೃಷ್ಣಪ್ಪ, ಡಿ.ಆರ್. ನಾಗರಾಜ, ಕೆ.ವಿ. ತಿರುಮಲೇಶ್, ಪಿ. ಲಂಕೇಶ್, ವಿಜಯಾ ದಬ್ಬೆ, ರಾಜೇಂದ್ರ ಚೆನ್ನಿ, ಚಂದ್ರಶೇಖರ ಪಾಟೀಲ, ಕೆ.ವಿ. ಸುಬ್ಬಣ್ಣ, ಬರಗೂರು ರಾಮಚಂದ್ರಪ್ಪ, ಸಾರಾ ಅಬೂಬಕ್ಕರ್ ಅವರ ಲೇಖನಗಳಿವೆ.
©2024 Book Brahma Private Limited.