ಜಗತ್ಪ್ರಸಿದ್ಧ ಭಾಷಣಗಳು ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರ ಭಾಷಣಗಳು-ಈ ಮೂಲ ಕೃತಿಯನ್ನು ಆರ್.ಕೆ.ಪೃಥಿ ಅವರು ಇಂಗ್ಲಿಷಿನಲ್ಲಿ ರಚಿಸಿದ್ದು, ಲೇಖಕ ರಾಜಶೇಖರ ಮಠಪತಿ (ರಾಗಂ) ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಭಾಷಣಗಳಲ್ಲಿಯ ವಿಚಾರಗಳು ವಿಶ್ವವು ಮಾಡಬೇಕಿದ್ದರ ಸಂಕಲ್ಪ, ಮಾಡಿರಬಹುದಾದ ತಪ್ಪುಗಳು, ಮುಂದಿನ ಪೀಳಿಗೆಗೆ ನೀಡಬಹುದಾದ ಕೊಡುಗೆಗಳನ್ನು ಕುರಿತು ಎಚ್ಚರಿಸುತ್ತವೆ. ಕೆಲವೇ ಗಣ್ಯರ ಭಾಷಣಗಳು ಏತಕ್ಕೆ ಪ್ರಸಿದ್ಧಿ ಪಡೆದವು ಎಂಬ ಬಗ್ಗೆಯೂ ಅಧ್ಯಯನ ನಡೆಸಲು, ಭಾಷಣಗಳ ಸ್ವರೂಪ-ಸ್ವಭಾವಗಳ ಕುರಿತು ತಿಳಿಯಲು ಈ ಕೃತಿ ತುಂಬಾ ಉಪಯುಕ್ತ.
©2024 Book Brahma Private Limited.