‘ಹುಸೇನಿ ದ್ವಿಪದಿಗಳು’ ವಿ.ಹುಸೇನಿ ಅವರ ದ್ವಿಪದಿಗಳ ಸಂಕಲನವಾಗಿದೆ. ಎದೆಗೆ ಅಪ್ಪಿಕೊಳ್ಳಬದ್ದರೂ ಪರವಾಲಲ್ಲ, ಗೋಲಗಾದರೂ ಬಂದು ಅತ್ತು ಜಡು ಸು ಎಂದು ಪ್ರೀತಿಯ ವಿಷಾದವನ್ನು ಎರಡು ಸಾಅನಲ್ಲಿ ಹರವಿ ಎಲ್ಲರೆದೆಯನ್ನು ಕಲ್ಲವಿಲಗೊಆಸುವ ಕಏ ಏ. ಹುಸೇನಿ ಆಂಧ್ರ ಮೂಲದ ವಲ್ಲೂಲನವರು, ಕನ್ನಡ ಮೇಷ್ಟ್ರಾಗಿ ಸಾಹಿತ್ಯಕ ಪ್ರೀತಿಯನ್ನು ಕಾಪಿಟ್ಟುಕೊಂಡು ಬರುತ್ತಿರುವ ಇವರು, ಎರಡು ಸಂಕಲನಗಳನ್ನು ಈಗಾಗಲೇ ಓದುಗಲಗೆ ನೀಡಿದ್ದಾರೆ. ಕನ್ನಡ ಸಾಹಿತ್ಯ ಹೊಸ ಪ್ರಕಾರದ ಬರವಣಿಗೆಗೆ ಸಾಕ್ಷಿಯಾಗುತ್ತಿರುವ, ತನ್ನನ್ನು ತಾನು ತೆರೆದುಕೊಳ್ಳುತ್ತಿರುವ ಬದಲಾವಣೆಯ ಕಾಲಘಟ್ಟದಲ್ಲಿ ವಿ. ಹುಸೇನಿಯವರು 'ಹುಸೇನಿ ದ್ವಿಪದಿಗಳು' ಎಂಬ ತಮ್ಮ ಮೂರನೇ ಸಂಕಲನವನ್ನು ಪ್ರಕಟಿಸುತ್ತಿದ್ದಾರೆ. ಐನೂರಕ್ಕೂ ಹೆಚ್ಚು ದ್ವಿಪದಿಗಳನ್ನು ಒಳಗೊಂಡಿರುವ ಈ ಸಂಕಲನದಲ್ಲಿ ಕಾಡುವ ಸ್ಥಾಯಿ ಭಾವ ಪ್ರೀತಿ, ಪ್ರೇಮ, ವಿರಹ, ಮುನಿಸು. ಎಲ್ಲ ದ್ವಿಪದಿಗಳಲ್ಲೂ 'ಹುಸೇನಿ' ಮತ್ತು ಅವನನ್ನು ಕಾಡುವ “ಅವಳು ಓದುಗಲಗೆ ಮುಖಾಮುಖಿಯಾಗುತ್ತಾರೆ. ಒಂದೇ ವಸ್ತು ವಿಷಯವನ್ನು ಇಟ್ಟುಕೊಂಡು ಏಕತಾನತೆ, ನೀರಸ ಭಾವ ಇಣುಕದಂತೆ ಬರೆಯುವುದು ಅಷ್ಟು ಸುಲಭದ ಮಾತಲ್ಲ. ಹುಸೇನಿಯ ಪ್ರೀತಿಯಲ ಬರೆದ ಅದೆಷ್ಟೋ ದ್ವಿಪದಿಗಳನ್ನು ಓದಿದಾಗ ಅದನ್ನಿಲ್ಲಿ ಅವರು ಸಾಧಿಸಿದ್ದಾರೆ ಎಂದರೆ ತಪ್ಪಾಗಲಾರದು.
©2025 Book Brahma Private Limited.