`ಅರಿವಿನ ಗರಿ' ಕೃತಿಯು ರಮೇಶಬಾಬು ಯಾಳಗಿ ಅವರ ದ್ವಿಪದಿಗಳ ಸಂಕಲನವಾಗಿದೆ. ನೂರಾರು ದ್ವಿಪದಿ, ಸಹಸ್ರಾರು ನುಡಿ ಮುತ್ತುಗಳ ಸರಮಾಲೆಯಾಗಿರುವ ಈ ಕೃತಿಯು ಬಜಾರಿನಲ್ಲಿ ದುಬಾರಿಯಾಗಿ ಸಿಗುವ ತಿಂಡಿಗಳಿಗಿಂತ, ಅಮ್ಮ ನೀಡುವ ಕೈ ತುತ್ತಿನ ರುಚಿಯಂತೆ, ಅದೆಷ್ಟೋ ಆರೋಗ್ಯ ಭಾಗ್ಯ ನೀಡುವ ದಿವ್ಯ ಔಷಧಿಯ ಗುಳಿಗೆಗಳಿವು. ನಡೆವ ದಾರಿಯಲ್ಲಿ ಕಲ್ಲು, ಮುಳ್ಳುಗಳಿವೆ ಎಂದು ಎಚ್ಚರಿಸುವ ದಾರಿದೀಪಗಳಾಗಿ ಇಲ್ಲಿನ ದ್ವಿಪದಿಗಳು ಮೂಡಿಬಂದಿವೆ. ಹೀಗೆ ಈ ಎಲ್ಲಾ ಅರ್ಹತೆಗಳಿಗೆ ಯೋಗ್ಯವಾದ ಮಾತುಗಳ ಭಂಡಾರವಾಗಿರುವ ಇಲ್ಲಿನ ಹಲವಾರು ದ್ವಿಪದಿಗಳಲ್ಲಿ ತತ್ವಜ್ಞಾನವನ್ನು ಸರಳ ಪದಗಳಲ್ಲಿ ಹೇಳುತ್ತಾರೆ. ಇಲ್ಲಿನ ಬಹುತೇಕ ದ್ವಿಪದಿಗಳು ವೇದಾಂತ ಸಾರವನ್ನು ಸಾರುತ್ತಿದೆ. ಒಟ್ಟಾರೆಯಾಗಿ ತಾನುಂಡ ಅನುಭವಸಾರಾಮೃತವನ್ನು ದ್ವಿಪದಿಗಳಾಗಿ ಕವಿ ಯಾಳಗಿಯವರು ಓದುಗರಿಗೆ ನೀಡಿದ್ದಾರೆ.
©2024 Book Brahma Private Limited.