ಭಕ್ತಿಯ ಹಲವು ಮುಖಗಳನ್ನು ಪರಿಚಯಿಸುತ್ತ, ವಿಶ್ಲೇಷಿಸುತ್ತ, ಭಾರತೀಯತೆಗೆ ಭಕ್ತಿ ಪರಂಪರೆ ನೀಡಿದ ಅನನ್ಯ ಕೊಡುಗೆಯನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ. ಶರಣಾಗತಿ ಭಕ್ತಿಯ ಮೂಲಧಾತು. ಆದರೆ, ಭಾರತೀಯ ಪರಂಪರೆಯಲ್ಲಿ ಭಕ್ತಿಯನ್ನು ಬಂಡಾಯದ ರೂಪದಲ್ಲಿಯೂ ಒಂದು ಚಳವಳಿಯ ರೂಪದಲ್ಲೂ ಗುರುತಿಸುತ್ತಾರೆ. ದಾಸರು ಕೂಡ ಭಕ್ತಿಯ ಮೂಲಕವೇ ಸಾಮಾಜಿಕ ಓರೆಕೋರೆಗಳ ವಿಮರ್ಶೆಯಲ್ಲಿ ತೊಡಗಿಕೊಂಡರು. ಕಬೀರನಿಗೆ ಕೂಡ ಭಕ್ತಿ ತನ್ನ ಸಾಮಾಜಿಕ ಒಲವು ನಿಲುವುಗಳ ಪ್ರತಿಪಾದನೆಯಗಿತ್ತು. ಇಂಥ ಹಲವು ಧಾರೆಗಳನ್ನು ಗುರುತಿಸುವ ಹಾಗೂ ಅವುಗಳನ್ನು ಭಾರತೀಯ ಪರಂಪರೆಯೊಟ್ಟಿಗೆ ನೋಡುವ ಪ್ರಯತ್ನವನ್ನು ಲೇಖಕರು ಈ ಕೃತಿಯಲ್ಲಿ ಮಾಡಿದ್ದಾರೆ. ಶರಣರು, ಹರಿದಾಸರು ಹಾಗೂ ತತ್ವಪದಕಾರರ ಕುರಿತು ಕೂಡ ಇಲ್ಲಿ ಚರ್ಚಿಸಲಾಗಿದೆ.
©2025 Book Brahma Private Limited.