Book Watchers

ಮೌನೇಶ ಕನಸುಗಾರ

ಮೌನೇಶ ಕನಸುಗಾರ- ಮೂಲತಃ ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ವಸ್ತಾರಿಯವರು. ಸಧ್ಯ ಬೆಂಗಳೂರಿನಲ್ಲಿ ವಾಸವಿದ್ದು ಗ್ರಾಫಿಕ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲಸದ ಜೊತೆ ಜೊತೆಗೆ ಫೋಟೋಗ್ರಫಿ ಮಾಡುತ್ತಾರೆ. ಚಾರಣ - ಪ್ರವಾಸದ ಹವ್ಯಾಸಗಳಿದ್ದು ಚಾರಣದ ಅನುಭವಗಳನ್ನು ಬರೆಯುತ್ತಾರೆ. ಒಂದಿಷ್ಟು ಅನುಭವದ ಲೇಖನಗಳನ್ನು ಬರೆದ ಇವರು ಕನ್ನಡ ಸಾಹಿತ್ಯಕೃಷಿ ಬಳಗವನ್ನು ಹುಟ್ಟು ಹಾಕಿ 100 ಕ್ಕೂ ಹೆಚ್ಚಿನ ಲೇಖಕರು ಸಕ್ರಿಯರಾಗಿರುವಂತೆ ದಿನವೂ ಹಳೆಯ ಲೇಖಕರ ಬರಹಗಳನ್ನು ಮೆಲುಕು ಹಾಕುತ್ತಾರೆ.

Articles

ಅಳಿಯದ ಋಣಾನುಬಂಧದ ಅನುಭವ ‘ಅಳಿದ ಮೇಲೆ’

ದುಡ್ಡುಕೊಟ್ಟು ಹಾಡನ್ನು ಕೇಳಬಹುದು. ದುಡ್ಡುಕೊಟ್ಟು ಮೈಯ ಸುಖವನ್ನು ಪಡೆಯಬಹುದು. ಮನಸ್ಸಿಗೆ ಸುಖವಾಗುವುದಕ್ಕೆ, ಹೃದಯಕ್ಕೆ ಶಾಂತಿ ದೊರೆಯುವುದಕ್ಕೆ ಮನಸ್ಸನ್ನು ತೆರೆಬಲ್ಲವರು ಬೇಕು. ನಮ್ಮೊಡನೆ ಭಾವ ತಲ್ಲೀನರಾಗುವರು ಬೇಕು.

Read More...

ವಾಸ್ತವ ಬದುಕಿನ ಕಥನ ‘ಬದುಕು ಬಣ್ಣ’

ಎಷ್ಟು ಚೆಂದದ ಶಿರ್ಷಿಕೆ ಅಲ್ಲವಾ! ಬದುಕಿನ ಈ ಬಿಳಿ ಕ್ಯಾನ್ವಾಸ್ ಮೇಲೆ ಬರೆದಷ್ಟು ಬಣ್ಣಗಳು! ಅರೆ ಹೌದಲ್ಲವಾ..ಆದರೆ ಅದ್ಯಾವುದು ಸುಸಜ್ಜಿತ ಚಿತ್ರಗಳಲ್ಲ! ವಿರಕ್ತಿ ಹೆತ್ತು ಶೂನ್ಯಕ್ಕಾಗಿ ಒಂದೆ ಭಂಗಿಯಲ್ಲಿ ಬದುಕನ್ನು ಬೀಳ್ಕೊಡಲು ನಿಂತ ಅವ್ಯಕ್ತ ಭಾವಗಳು!

Read More...

ಜೀವ ವಿಕಾಸ ಪಥದ ಅನ್ವೇಷಣೆಗಳ ಆಗರ ‘ಕರ್ವಾಲೊ’

ದೃಷ್ಟಿ ನೆಟ್ಟ ಕಣ್ಣುಗಳು ಪುಟದ ಆಚೀಚೆ ಅಲುಗಾಡದಂತೆ ತಟಸ್ಥವಾಗಿ ಸಾಲುಗಳನ್ನೆ ಓದಿಸುವ ಭಾರಿ ಕೌತುಕದ ಅನ್ವೇಷಣಾ ಮನಸ್ಥಿತಿಯನ್ನು ಸೃಷ್ಟಿಸುವ ಕತೆ ಇಲ್ಲಿ ಹೆಣೆದುಕೊಂಡು ಸಾಗುತ್ತದೆ. ಜೀವ ವಿಕಾಸ ಪಥದಲ್ಲಿ ಅನಂತ ಬದಲಾವಣೆಗಳಾಗುತ್ತಲೆ ಇರುತ್ತವೆ. ಇದೊಂಥರಾ ಚಿದಂಬರ ರಹಸ್ಯ.

Read More...

ಬಿತ್ತಿದರೆ ಬಿತ್ತುವುದು ಮುಕ್ಕು ಚಿಕ್ಕಿಯ ಕಾಳು....

ಒಂದೆ...ಗುಕ್ಕಿಗೆ ಎಲ್ಲಾ ಓದಿಬಿಡಬೇಕು ಅನ್ನುವಂಗ ಕತೆ ನಮ್ಮನ್ನ ಆವರಿಸುವುದರಲ್ಲಿ ಎರಡು ಮಾತಿಲ್ಲ. ಪಾತ್ರಗಳು ಎದೆಯಲ್ಲಿ ಮಾತನಾಡುತ್ತವೆ. ನಮ್ಮನ್ನೆಲ್ಲಾ ಈ ಕತೆ ಆಳಕ್ಕೆ ಕರೆದೊಯ್ಯುತ್ತದೆ. ಉತ್ತರ ಕರ್ನಾಟಕದ ಸಂಪ್ರದಾಯ, ಪರಸ್ಪರ ಸಹಬಾಳ್ವೆ , ಬಡತನ, ಅಲ್ಲಿಯ ಜನರ ಬದುಕು ಎಲ್ಲವೂ ಕನ್ನಡಿ ಹಿಡಿದು ತೋರಿಸಿದಂತಿದೆ.

Read More...

ನೋ  ಪ್ರೆಸೆಂಟ್ಸ್  ಪ್ಲೀಸ್....

ನಾನು ಎಂದೂ ನೋಡಿರದ ಶಹರ. ಅಪ್ಪನನ್ನು ಹಗಲು ರಾತ್ರಿಗಳೆನ್ನದೆ ದುಡಿಸಿಕೊಂಡು ಕಿಸೆಗೊಂದಿಷ್ಟು ಕಾಸು ತುರುಕಿ ನಕ್ಕ ಊರು. ಅಂತಹದೊಂದು ದೊಡ್ಡ ನಗರ ಬೆಳಗಾದರೆ ಸಾಕು ಬದುಕಿನ ಕುರಿತ ಕಥೆಗಳು ಹೇಳಲು ತುದಿಗಾಲಂಚಲಿ ನಿಂತುಬಿಟ್ಟಿರುತ್ತೆ.

Read More...