Book Watchers

ಜೋಗಿ (ಗಿರೀಶ್ ರಾವ್ ಹತ್ವಾರ್)

ಜೋಗಿ ಎಂಬ ಹೆಸರಿನಿಂದ ಜನಪ್ರಿಯರಾಗಿರುವವರು ಲೇಖಕ ಗಿರೀಶ್ ರಾವ್ ಹತ್ವಾರ್. ಇವರು ಕನ್ನಡದ ಹೊಸಕಾಲದ ಪ್ರಮುಖ ಲೇಖಕರಲ್ಲೊಬ್ಬರಾಗಿದ್ದು ಹಲವಾರು ಕತೆ, ಕಾದಂಬರಿಗಳನ್ನು ರಚಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಅಂಕಣ ಬರಹಗಳಿಂದಲೂ ಪ್ರಸಿದ್ಧಿಯಾಗಿದ್ದಾರೆ. ಧಾರಾವಾಹಿ, ಸಿನೆಮಾಗಳ ಗೀತಸಾಹಿತ್ಯ, ಚಿತ್ರಕಥೆ ಸಂಭಾಷಣೆ ರಚನೆಯಲ್ಲೂ ತೊಡಗಿಕೊಂಡಿದ್ದಾರೆ. ಜೋಗಿ ಕನ್ನಡಪ್ರಭ ಪತ್ರಿಕೆಗೆ 'ಬಾಲಿವುಡ್ ಘಾಸಿಪ್' ಎಂಬ ಅಂಕಣ ಬರೆಯುತ್ತಿದ್ದರು. ಹಾಯ್ ಬೆಂಗಳೂರು ಪತ್ರಿಕೆಯಲ್ಲಿ 'ರವಿ ಕಾಣದ್ದು' ಅಂಕಣ ಬರೆಯುತ್ತಿದ್ದ ಜೋಗಿ ಅದೇ ಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು.

Articles

ಸಂಬಂಧವಿಲ್ಲದೇ ಸಂಬಂಧಿಸಿದ ಎರಡು ತೋಳು `ತೇಜೋ- ತುಂಗಭದ್ರಾ'

ಇಂಥ ಸುರಳೀತ ಸಾಗುವ ಕೃತಿಯೊಂದನ್ನು ಓದಿ ಬಹಳ ವರ್ಷಗಳೇ ಆಗಿದ್ದವು. ಇತ್ತಿತ್ತಲಾಗಿ ನಾನು ವಾಸ್ತವವಾದಿ ಕಾದಂಬರಿಗಳನ್ನು ಓದುವುದನ್ನೇ ಬಿಟ್ಟಿದ್ದೆ. ಚರಿತ್ರೆಯ ಕತೆಗಳನ್ನೂ ಓದುತ್ತಿರಲಿಲ್ಲ. ಅದೇ ಚಾಳಿ ಮುಂದುವರಿಸಿದ್ದರೆ ನಾನು ಈ ಕಾದಂಬರಿ ಕೊಟ್ಟಿರುವ ಸಂತೋಷವನ್ನು ಕಳೆದುಕೊಳ್ಳುತ್ತಿದ್ದೆ.

Read More...

ದುರ್ಬರ ಕ್ಷಣದಿಂದ ಆವಿರ್ಭವಿಸಿದ ಆರ್ದ್ರತೆಯ ಕತಾಗುಚ್ಛ ‘ವರ್ಜಿನ್ ಮೊಹಿತೊ’

ಒಂದು ದುರ್ಬರ ಕ್ಷಣವನ್ನು ಅನುಭವಿಸುತ್ತಲೇ ಅದನ್ನು ಕಲೆಯಾಗಿಸುವ ಸತೀಶ್ ಚಪ್ಪರಿಕೆ, ಕತೆಯನ್ನು ಒಂದು ವಿಚಿತ್ರ ಪ್ರಶ್ನೆಯೊಂದಿಗೆ ಕೊನೆಗೊಳಿಸುತ್ತಾರೆ. ಈ ಕತೆಯನ್ನು ಹೇಳಬೇಕೆಂದು ಮನಸ್ಸು ತುಡಿಯುತ್ತಿದೆ. ಆದರೆ ನೀವೇ ಅದನ್ನು ಓದುವುದು ಒಳ್ಳೆಯದು. ಸ್ಪಾಯ್ಲರ್ ಅಲರ್ಟ್ ಹಾಕುವುದು ನಾನೊಲ್ಲೆ.

Read More...