Story/Poem

ಕೊಟ್ರೇಶ್ ಅರಸೀಕೆರೆ

ಕವಿ ಕೊಟ್ರೇಶ್ ಅರಸೀಕೆರೆ ಅವರು 1975ರಲ್ಲಿ ಅರಸೀಕೆರೆಯಲ್ಲಿ ಜನಿಸಿದರು. ತಂದೆ ನೀಲಕಂಠ ಸ್ವಾಮಿ, ತಾಯಿ ಸುಗುಣಾಂಬ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ವನ್ನು ಅರಸೀಕೆರೆಯಲ್ಲಿಯೇ ಪೂರೈಸಿದರು. ಅರಸೀಕೆರೆಯಲ್ಲಿ ಸಣ್ಣದೊಂದು ಬೆಣ್ಣೆ ದೋಸೆ ಕ್ಯಾಂಟೀನ್ ನಡೆಸುತ್ತಿದ್ದಾರೆ. ಸಾಹಿತ್ಯ, ರಂಗಭೂಮಿಯಲ್ಲಿಯೂ ಆಸಕ್ತರು. ‘ಭವಸಾರ’ ಅವರ ಚೊಚ್ಚಲ ಕವನ ಸಂಕಲನ.

More About Author

Story/Poem

ಮುಕ್ತಿ

ಮುಕ್ತಿ ಲೋಕದ ಭವ ಬಂಧನಗಳಿಂದ ಮುಕ್ತನಾಗಿ ನೆರೆಯಲ್ಲಿ ಸುಮ್ಮನೆ ತೇಲಿ ಹೋಗಿಬಿಡಬೇಕು ಫಲಭರಿತ ಮಣ್ಣಿನ ಜೊತೆ ಫಲ ಬಿಡುವ ವೃಕ್ಷದ ಬೇರು ನನ್ನ ತಾಕಿ ಫಲ ಕಾಣಬೇಕು ನಾಳೆ ಮಗುವೊಂದು ಆ ಮರದ ಫಲ ಹಿಡಿದು ನನ್ನ ಹಲ್ಲಿರದ ಬಾಯಿಂದ ಕಚ್ಚಿ ಹಿಡಿಯಬೇಕು - ಕೊಟ್ರೇಶ್ ಅರಸೀಕೆರೆ

Read More...

ವರ್ಷೆ

ನಡಿತಾಳ ನಡೆತಾಳ ತಡೆ ತಡೆದು ನಡಿತಾಳ...... ಉಬ್ಬಿಸಿ ಎದೆಯ ತಗ್ಗಿಸಿ ತಲೆಯ ಕಡುಗಪ್ಪು ಕೂದಲು ನಾಗರ ಹೆಡೆಯಲಿ ಸಾವಿರ ಹಾದರ ಪಿಳಿಪಿಳಿಯ ಕಣ್ಣು ಹರೆಯದ ಹೆಣ್ಣು ಮುಂದಕ ಬಾಗಿ ಹಿಂದಕ ತಾಗಿ ಚೆಲುವಿನಲಿ ನೂರು ಚಿತ್ತಾರ ಹಾಕಿ ಸರಸರ ನಡೆತಾಳ ಸರಕ್ಕನ ತಿರುಗ್ತಾಳ ಹರೆಯದ...

Read More...