ಕವಿ ಕೊಟ್ರೇಶ್ ಅರಸೀಕೆರೆ ಅವರು 1975ರಲ್ಲಿ ಅರಸೀಕೆರೆಯಲ್ಲಿ ಜನಿಸಿದರು. ತಂದೆ ನೀಲಕಂಠ ಸ್ವಾಮಿ, ತಾಯಿ ಸುಗುಣಾಂಬ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ವನ್ನು ಅರಸೀಕೆರೆಯಲ್ಲಿಯೇ ಪೂರೈಸಿದರು. ಅರಸೀಕೆರೆಯಲ್ಲಿ ಸಣ್ಣದೊಂದು ಬೆಣ್ಣೆ ದೋಸೆ ಕ್ಯಾಂಟೀನ್ ನಡೆಸುತ್ತಿದ್ದಾರೆ. ಸಾಹಿತ್ಯ, ರಂಗಭೂಮಿಯಲ್ಲಿಯೂ ಆಸಕ್ತರು. ‘ಭವಸಾರ’ ಅವರ ಚೊಚ್ಚಲ ಕವನ ಸಂಕಲನ.