Story/Poem

ಚೈತ್ರಾ ಶಿವಯೋಗಿಮಠ

ಕವಯತ್ರಿ ಚೈತ್ರಾ ಶಿವಯೋಗಿಮಠ ಮೂಲತಃ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದವರು. ಪ್ರಸ್ತುತ ಬೆಂಗಳೂರಿನ ವಾಸವಿದ್ದಾರೆ.  ವಿಟಿಯು ವಿಶ್ವವಿದ್ಯಾಲಯದಿಂದ ಎಂಟೆಕ್ ಪದವೀಧರರು. ಸಾಫ್ಟವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಓದು ಬರಹ, ನಿರೂಪಣೆ ಅವರ ಹವ್ಯಾಸ. ನಾಡಿನ ಮುದ್ರಣ ಹಾಗೂ ಡಿಜಿಟಲ್ ಪ್ರತ್ರಿಕೆಗಳಲ್ಲಿ ಇವರ ಕವನ-ಬರಹಗಳು ಪ್ರಕಟವಾಗಿವೆ. 

More About Author

Story/Poem

ಕಾಲ ಭೈರವಿ - ಭಾರತಾಂಬೆ

ಹೂ ಬಿಟ್ಟ ನೆಲ ಕಾಯಿ ಕಚ್ಚಿದ ಗಿಡ ಉಗಿದು ನುಂಗಿದ ಆಕಾಶ ಸುತ್ತಲೂ ತೆರೆದ ಬನ ಶಾಂತ ಸ್ವರೂಪಿ ಕಾಲ ಭೈರವಿ. ಖಡ್ಗ ರುಂಡಗಳು ಕೈಯಲ್ಲಿ ಇಲ್ಲ ಶಿವನ ಕಪಾಲ ಅವಳ ಬಳಿಯಿಲ್ಲ ಬಿಳಿ ತಾವರೆಯ ಮುಡಿದು ನಿಂತ ಭಾರತ ಭೈರವಿ ಇವಳು! ರಕ್ತದ ದೇಶವಲ್ಲ ಇದು ರಕ್ತವಲ್ಲ ಕಾಲ ಭೈರವಿ ರಾಗದಲ್...

Read More...

ಖುದಾ ಹಫೀಜ್

ಬನ್ನಿ ಹುಡುಗಿಯರೇ, ಇಗೋ ಇದು ನಿಮಗೆ ಸ್ವಾಗತ ನಿಮ್ಮ ಆವಾಸ ಸುಖಕರವಾಗಿರಲಿ ಎಂದು ಆಶಿಸುತ್ತೇವೆ ಹಾಗೇ ನೀನು ನೀನಾಗಿರಬಹುದು ಯಾವ ಸಂಕೋಚವೂ ಬೇಡ ಹಾಂ, ನೆನಪಿರಲಿ ಇರುವಿಕೆ ಕೂಡ ನಮ್ಮದೇ ರೀತಿಗನುಗುಣವಾಗಿರಲಿ ಹುಳುವಿನಿಂದ ಚಿಟ್ಟೆಯಾದ ನಿನ್ನದೇ ಬಣ್ಣದ ಕಣ್ಣನ್ನು ಪ್ರೀತಿಸಲು ಮರೆ...

Read More...

ಗುಪ್ತಗಾಮಿನಿ

ನೆನಪಿದೆಯಾ ನಿನಗೆ ನಾಳೆಗಳ ನೆಲದಲ್ಲಿ ಬಿತ್ತಿದ್ದ ಅದೆಷ್ಟು ಕನಸುಗಳ ರಾಶಿ ಮಾಡಿದ್ದೆವು ನಾವಿಬ್ಬರೂ ಕೂಡಿ ನೆಳಲು ಬೆಳಕಿನ ಕ್ಯಾನ್ವಾಸಿನ ಮೇಲೆ ನಮ್ಮ ಬದುಕಿನ ಚಿತ್ರ ಮೂಡಿಸಿದ್ದೆ ನಿನ್ನ ಕುಂಚದಲ್ಲಿ ನನ್ನ ತಿದ್ದಿ ತೀಡಿ ಬರೆದು ಚಂದ ಮಾಡಿ ನೋಡಿಕೊಳ್ಳುವೆ ಎಂದು ಮಾತು ಕೊಟ್ಟಿದ್ದ...

Read More...

ಇಷ್ಟೊಂದು ಸುಲಭ ಹೇಗೆ

ದ್ವೇಷಿಸುವುದು ಸುಲಭ ಗೆಳೆಯಾ ಹೆಚ್ಚೇನಿಲ್ಲ ಒಬ್ಬರ ಫಲಗಳನ್ನು ಮತ್ತೊಬ್ಬರು ಕೊಚ್ಚಿ ಗುಂಡಿಗೆಗಳ ಚುಚ್ಚಿದರೆ ಆಯಿತು ಕತ್ತಿ ಗುರಾಣಿಗಳ ಲೆಕ್ಕ ದಾಖಲೆಯಾಗುತ್ತಲೇ ಇದೆ ಕಾಲದ ಸ್ಮೃತಿಯಲ್ಲಿ ದ್ವೇಷಿಸುವುದೇನೋ ಬಹಳ ಸುಲಭ ಹೊಲ ಹೊಕ್ಕು ಮೇಯುವ ದನಗಳನ್ನು ಹೊಡೆದು ಅಂಗ...

Read More...