ಲೇಖಕಿ ವಾಗೀಶ್ವರಿ ಶಾಸ್ತ್ರಿ ಅವರು ಜನಿಸಿದ್ದು 1926 ಜುಲೈ 15ರಂದು. ಹಾಸನ ಜಿಲ್ಲೆ ಸಕಲೇಶಪುರದವರಾದ ಇವರಿಗೆ ಬಾಲ್ಯದಿಂದಲೂ ಸಂಗೀತ ಹಾಗೂ ಸಾಹಿತ್ಯದ ಬಗ್ಗೆ ಆಸಕ್ತಿಯಿತ್ತು.
ಸಂಪ್ರದಾಯದ ಹಾಡುಗಳ ಸಂಗ್ರಹ, ಸುಲಭ ಸಾಂಪ್ರದಾಯಿಕ ವಿವಾಹ, ಸಿರಿ ಸಿಂಗಾರದ ಸಿಂಗಾಪುರ, ಅಪೂರ್ವ ಕಥಾಸಂಗಮ, ಚಿತೆಯಿಂದ ಚಿಂತೆಗೆ, ಕರ್ನಾಟಕದ ಹಬ್ಬಗಳು, ಹಿರಿಯರು ಹೇಳಿದ ಕತೆಗಳು ಇವರ ಕೃತಿಗಳು. ಇವರಿಗೆ ಕಾವ್ಯಾನಂದ ಪ್ರಶಸ್ತಿ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.