ಕವಿ, ಅನುವಾದಕ ವಿ. ಕೃಷ್ಣಮೂರ್ತಿ ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರದವರು.ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರರು. ರಾಜೀವ ತಾರಾನಾಥರ ಮಾರ್ಗದರ್ಶನದಲ್ಲಿ ಮಾಸ್ಟರ್ ಆಫ್ ಲಿಟರೇಚರ್ ಪದವಿ ಗಳಿಸಿದ್ದಾರೆ.
ಸೊಲ್ಲಾಪುರದ ದಯಾನಂದ ಕಾಲೇಜಿನಲ್ಲಿ ತಮ್ಮ ವೃತ್ತಿ ಆರಂಭಿಸಿ, ನಂತರ ಗೋವಾದ ಸರ್ಕಾರಿ ಕಾಲೇಜ್ ದಮನ್‌ನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ನಿರಂತರ ವೃತ್ತಿನಿರತ ಕೆಲಸಗಳೊಂದಿಗೆ ಸಂಗೀತ, ಸಾಹಿತ್ಯ, ಯೋಗ, ಅನುವಾದ ಹೀಗೆ ಹಲವಾರು ರಂಗಗಳಲ್ಲಿ ತೊಡಗಿಸಿಕೊಂಡಿದ್ದರು.
‘ಹೆಜ್ಜೆ ಮೂಡದ ಹಾದಿ’, ‘ಶೃತಿ ಹಿಡಿದು ಶೂನ್ಯದಲಿ’, ‘ನೆನಪಿರಲಿ ಮರೆಯಲು’ ಮುಂತಾದ ಕೃತಿಗಳನ್ನು ಹೊರತಂದಿದ್ದಾರೆ. ‘ಡಬ್ಲು.ಬಿ.ಯೇಟ್ಸ್ ಕವಿಯ ಎಪ್ಪತ್ತು ಕವನಗಳು’ ಅವರ ಇತ್ತೀಚಿನ ಕೃತಿ.