About the Author

ಲೇಖಕಿ ಉಷಾ ನರಸಿಂಹನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಶಿವನಸಮುದ್ರದವರು. ತಂದೆ ಎಸ್.ವಿ. ಸಂಪತ್, ತಾಯಿ- ರಾಜಲಕ್ಷ್ಮಿ ಸಂಪತ್. ಪ್ರಾಥಮಿಕ ವಿದ್ಯಾಭ್ಯಾಸವನ್ನು ಹಾಸನದಲ್ಲಿಯೂ ಆನಂತರದ ವಿದ್ಯಾಭ್ಯಾಸವನ್ನು ಮೈಸೂರು ಮತ್ತು ತುಮಕೂರಿನಲ್ಲಿ ನೆರವೇರಿಸಿದರು. ಬಿಎಸ್ಸಿ ವಿಜ್ಞಾನ ಪದವೀಧರರು. ಮೊದಲಿನಿಂದಲೂ ಸಾಹಿತ್ಯ ಸಂಗೀತ, ಲಲಿತಕಲೆಗಳಲ್ಲಿ ಆಸಕ್ತಿ. ಕಾವ್ಯ , ಕತೆ, ಕಾದಂಬರಿ, ನಾಟಕ ಗೀತರೂಪಕ, ಚಿತ್ರಕತೆ, ಸಂಭಾಷಣೆ, ಸಾಕ್ಷಚಿತ್ರ ಕ್ಷೇತ್ರಗಳಲ್ಲಿ ಕೃಷಿ ಮಾಡಿದ್ದಾರೆ.

ಕೃತಿಗಳು: ‘ಪಯಣಕ್ಕೆ ಮುನ್ನ’ ಇವರ ಮೊತ್ತ ಮೊದಲ ಪ್ರಕಟಿತ ಕವನ ಸಂಕಲನ. ‘ಅಂಗರಾಗ’, (ಕಥಾ ಸಂಕಲನಗಳು) ‘ಮಾಮಿ ಮತ್ತು ಇತರ ಕತೆಗಳು’, ‘ತಾವರೆದೇಟು’ ಹಾಗೂ ‘ಹರಿವ ನೀರು ಕೊರೆವ ಬಂಡೆ’ , (ಕಾದಂಬರಿಗಳು) ‘ಕಾಮಿನೀ ತಲ್ಪ’, ‘ಕೃಷ್ಣಮೃಗ ಮತ್ತು ಪರ್ಷಿಯಾ ಪರಿಮಳ’  (ನಾಟಕ) ‘ಕದಳಿ ಕಲ್ಯಾಣ ’

 ‘ಪರ್ಷಿಯಾಪರಿಮಳ’ ಕಾದಂಬರಿ ಹಾಗೂ  ‘ಬೀಬಿ ನಾಚ್ಯಾರ್’ ಕಿರು ಕಾದಂಬರಿಯು ತರಂಗದಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದೆ.  ಕದಳಿ ಕಲ್ಯಾಣ’ ನಾಟಕವು ಸುರುಚಿಯ ರಂಗಸಿಂಧುವಿನಲ್ಲಿ ಪ್ರಕಟಗೊಂಡಿದ್ದು, ‘ಸೀರೆ’ ಎಂಬ ಸಣ್ಣಕತೆಯು ಕಿರುಚಿತ್ರವಾಗಿದೆ. ಮೈಸೂರು ಆಕಾಶವಾಣಿ ಕೇಂದ್ರದಿಂದ ಬಾನುಲಿ ನಾಟಕಗಳನ್ನು ರಚಿಸಿ ಅಭಿನಯಿಸಿ ನಿರ್ದೇಶಿಸಿದ ಅನುಭವವಿದ್ದು, ಸಂಕ್ಷಿಪ್ತ ರಾಮಾಯಣ ನೃತ್ಯರೂಪಕಕ್ಕೆ ಸಾಹಿತ್ಯ ಮತ್ತು ಗೀತೆಗಳನ್ರನು ರಚಿಸಿದ್ದಾರೆ. ‘ಕರ್ನಾಟಕ ಇತಿಹಾಸ ದರ್ಶನ ಪ್ರಾಗ್ಗೇತಿಹಾಸಕಾರರು ಕಂಡಂತೆ’ ಎಂಬ ನಾಟಕ ರಚನೆ, ಬೀಬಿ ನಾಚ್ಯಾರ್ ಎಂಬ ಕಾದಂಬರಿ, ಬೆಳಕು ಬೆಂಕಿಯಾಯಿತಯ್ಯಾ ನಾಟಕ, ಭಾರತದ ಪ್ರಾಚೀನ ಶಿಕ್ಷಣ: ಸೃಜನಾತ್ಮಕ ನೋಟ- ನಾಟಕ, ಗಂಧವಾಹ- ಕವನ ಸಂಕಲನ, ಸಂತೆಯ ಸರಕು - ಪ್ರಬಂಧಗಳ ಸಂಕಲನವು 2021ರ ಸಾಲಿನಲ್ಲಿ ಪ್ರಕಟಗೊಂಡಿದೆ.

ಇವರ ಕಂಚುಗನ್ನಡಿ ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ದೊರೆತಿದೆ. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಜಗಜ್ಯೋತಿ ಕಲಾವೃಂದ ಮುಂಬೈ ಇವರ ಸುಶೀಲಾಶೆಟ್ಟಿ ಸ್ಮಾರಕ 2009ರ ಕಥಾಸಂಕಲನ ಸ್ಪರ್ಧೆಯಲ್ಲಿ ಮಾಮಿ ಮತ್ತು ಇತರ ಕಥೆಗಳು ಕೃತಿಗೆ ಪ್ರಶಸ್ತಿ, ದಸರಾ ವಸ್ತು ಪ್ರದರ್ಶನದ ಆಶು ಕವಿತಾ ಸ್ಪರ್ಧೆಯಲ್ಲಿ ಇವರ ‘ದುಬಾಯ್ ಗಂಡನ ಮೋಹದ ಮಡದಿ’ ಕವನಕ್ಕೆ ಪ್ರಥಮ ಬಹುಮಾನ, ಕಾಮಿನೀತಲ್ಪ ಕೃತಿಗೆ 2010ನೇ ಸಾಲಿನ ಮಾಸ್ತಿ ಕಾದಂಬರಿ ಪುರಸ್ಕಾರ, ಕೃಷ್ಣಮೃಗ ಕೃತಿಗೆ 2011 ಮಾಸ್ತಿ ಕಾದಂಬರಿ ಪುರಸ್ಕಾರ, ತಾವರೆದೇಟು ಕಥಾ ಸಂಕಲನಕ್ಕೆ ಕ.ಲೇ.ಸಂ.ನ ಸುಧಾಮೂರ್ತಿ ದತ್ತಿನಿಧಿ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ.

ಉಷಾ ನರಸಿಂಹನ್

(10 Jun 1964)

Awards