ಕಥೆಗಾರ್ತಿ ತುಳಸಿ ವೇಣುಗೋಪಾಲ್ ಅವರು ಕನ್ನಡದ ಸಣ್ಣ ಕಥೆಗಳ ಬರಹಗಾರರು. 1954 ನವೆಂಬರ್ 18 ರಂದು ಮಂಗಳೂರಿನಲ್ಲಿ ಹುಟ್ಟಿದರು. ಕನ್ನಡದ ಸ್ನಾತಕೋತ್ತರ ಪದವೀಧರರು. ’ಮುಂಜಾವಿಗೆ ಕಾದವಳು, ಪುಟಗಳ ಮಧ್ಯದಲ್ಲೊಂದು ನವಿಲುಗರಿ, ಜುಗಲಬಂದಿ’ ಕಥಾ ಸಂಕಲನ ರಚಿಸಿದ್ಧಾರೆ. ಮುಗಿಲ ಮಲ್ಲಿಗೆ ಎಟಕಿಸಿ, ಬೊಗಸೆಯಲ್ಲಿಷ್ಟು ಬೆಳಕು ತುಂಬಿ ಅವರ ಸಂಪಾದಿತ ಕೃತಿ. ಅವರ ಮೊದಲ ಕಥಾಸಂಕಲನಕ್ಕೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ, ಸರ್ ಎಂ. ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಜಿ.ಎಸ್. ಶಿವರುದ್ರಪ್ಪ ಬಹುಮಾನ ಪಡೆದಿದ್ಧಾರೆ.