ಲೇಖಕ ಸುರೇಶ ಮುದ್ದಾರ ಅವರು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮದವಾಲ ಗ್ರಾಮದವರು. ಅರಭಾವಿ ಮಠದ ಶ್ರೀ ಶಿವಾನಂದ ಶಿವಯೋಗಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರು. ‘ಸಾಂವಿ’ ಎಂಬುದು ಇವರ ಕಥಾ ಸಂಕಲನ.
ಗೋಕಾಕ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಯಾಗಿ, ಮೂಡಲಗಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕತೆ, ಕಾವ್ಯ, ವಿಮರ್ಶೆ ಇವರ ನೆಚ್ಚಿನ ಸಾಹಿತ್ಯಿಕ ಕ್ಷೇತ್ರಗಳು. ಇವರು ಬರೆದ ಲೇಖನಗಳು ಜಿಲ್ಲೆಯ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. `ಸಾಂವಿ’ (ಕಥಾ ಸಂಕಲನ) ಇವರ ಚೊಚ್ಚಲ ಕೃತಿ.