ಲೇಖಕಿ ಶ್ರೀವಳ್ಳಿ ಟಿ.ಎಸ್., ಅವರು ಮೈಸೂರಿನವರು. ಎಂ.ಎ., ಪಿಎಚ್.ಡಿ. ಪದವೀಧರರು. ಕೃತಿಗಳು : ಗೋವಿಂದಪೈ ಪತ್ರಬಂಧ (1999), ಗಿರಿಬಾಲೆ (1994), ಎರಡು ಚಾರಿತ್ರಿಕ ನಾಟಕಗಳು (1991), ಸತ್ಯಕಾಮ (1990), ಶುನಃಶೇಫ (1990), ಮಕ್ಕಳ ನಾಲ್ಕು ನಾಟಕಗಳು (1989), ಸಂಶೋಧನೆ: ಸರಸ್ವತಿಬಾಯಿ ರಾಜವಾಡೆ ಒಂದು ಅಧ್ಯಯನ-(2000) ಪ್ರಕಟವಾಗಿದೆ.
ಜಾಗೃತಿ-ಟೆಲಿ ಫಿಲ್ಮ್ ನಲ್ಲಿ ಹಾಗೂ ನೋಡು ಬಾ ನಮ್ಮೂರ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ. ವಚನಧಾರೆ ಬೇಂದ್ರೆ ನಮನ, ಭಸ್ಮಮೋಹಿನಿ ಹಾಗೂ ಭಾರತೀಯ ಸ್ತ್ರೀ ಒಂದು ಚಿತ್ರಣ ನೃತ್ಯ ರೂಪಕಕ್ಕೆ ವಸ್ತ್ರವಿನ್ಯಾಸ, ಮಕ್ಕಳ ರೇಡಿಯೋ ನಾಟಕಗಳ ರಚಿಸಿ, ನಿರ್ದೇಶಿಸಿದ್ದಾರೆ.
ಮೈಸೂರಿನ ನವರಸ ನಾಟ್ಯಾಲಯ ಧರ್ಮದರ್ಶಿಗಳು, ಸಮತಾ ಅಧ್ಯಯನ ಕೇಂದ್ರ ಸ್ಥಾಪಕ ಅಧ್ಯಕ್ಷರು, ಚಿಗುರು ಮಕ್ಕಳ ಕಲಾ ಸಂಸ್ಥೆ, ವ್ಯವಸ್ಥಾಪಕ ನಿರ್ದೇಶಕರು, ಮಂಜುಶ್ರೀ ಮುದ್ರಣ (1987-1995) ವನ್ನು ಸ್ಥಾಪಿಸಿ ಆರಂಭಿಸಿದ್ದರು.