ಲೇಖಕಿ ಶ್ವೇತಾ ಭಿಡೆ ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸಮೀಪದ ಕೋಣಂದೂರಿನವರು. ಶಿವಮೊಗ್ಗದಲ್ಲಿ ಬಿಕಾಮ್ ವ್ಯಾಸಂಗ ಮಾಡಿ, ನಂತರ ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಎಂಕಾಮ್ ಪದವೀಧರೆಯಾದ ಇವರು ಮೊದಲು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಕ್ರಮೇಣ ಸಾಹಿತ್ಯದ ಕಡೆಗೆ ಆಸಕ್ತಿ ಬೆಳೆಸಿದರು. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ, ವಾರ ಪತ್ರಿಕೆ ಮತ್ತು ಪಾಕ್ಷಿಕಗಳಲ್ಲಿ ಇವರ ಲೇಖನಗಳು, ಕಥೆಗಳು ಪ್ರಕಟವಾಗಿವೆ. ಸುಮಾರು ಮೂರು ವರ್ಷಗಳ ಕಾಲ ಮಹಿಳೆಯರ ಬ್ಲಾಗಿಂಗ್ ಮತ್ತು ವಿಡಿಯೋ ಆನ್ಲೈನ್ (ಡಿಜಿಟಲ್ ಮೀಡಿಯಾ) ಮಾಧ್ಯಮವಾದ “ಮಾಮ್ಸ್ಪ್ರೆಸೊ” ಸಂಪಾದಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಸುಮಾರು ಒಂದು ವರ್ಷಕ್ಕೂ ಅಧಿಕ ವಿಶ್ವವಾಣಿ ಪತ್ರಿಕೆಗೆ ಅ “ಆರಾಮ” ಪುರವಣಿಯ “ಶ್ವೇತ ವರ್ಣ” ಅಂಕಣವನ್ನು ಬರೆದಿದ್ದಾರೆ. “ಕನ್ನಡ ಮಾಣಿಕ್ಯ” ಮಾಸ ಪತ್ರಿಕೆಯ “ನಿರ್ಭಿಡೆ” ಅಂಕಣಕಾರರೂ ಹೌದು.