ಪ್ರಗತಿಪರ ಚಿಂತಕ, ಹವ್ಯಾಸಿ ಬರಹಗಾರರಾದ ಶ್ರೀನಿವಾಸ್ ಕಾರ್ಕಳ ಅವರು 1961 ಏಪ್ರಿಲ್ 11ರಂದು ಮೂಡಬಿದರೆಯಲ್ಲಿ ಜನಿಸಿದರು. ವಿಜ್ಞಾನ ಪದವೀದರರಾದ ಇವರು ಕಾಲೇಜು ದಿನಗಳಿಂದಲೇ ಬರವಣಿಗೆಯಲ್ಲಿ ತೊಡಗಿಸಿಕೊಂಡವರು. ಇವರು ಬರೆದ ವೈಚಾರಿಕ ಬರಹ, ವಿಮರ್ಶೆ, ಚಾರಣ ಕಥನಗಳು ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ರಂಗಭೂಮಿ ಆಸಕ್ತರೂ ಆಗಿರುವ ಇವರು ಮಂಗಳೂರಿನ ಆಕಾಶವಾಣಿಯಲ್ಲಿ ನಾಟಕ ಕಲಾವಿದರಾಗಿಯೂ ತೊಡಗಿಸಿಕೊಂಡಿದ್ದರು. ‘ಸಮುದಾಯ’ ‘ಅಯನ’ ನಾಟಕ ತಂಡಗಳಲ್ಲಿಯೂ ಕ್ರಿಯಾಶೀಲರಾಗಿದ್ದರು.
ನೀಹಾರಿಕಾ ಇವರು ರಚಿಸಿದ ಕವನ ಸಂಕಲನ. ಗುಜರಾತ್ ಫೈಲ್ಸ್ ಅನುವಾದಿತ ಕೃತಿಯಾಗಿದೆ. ಇವರ ‘ನಿಹಾರಿಕಾ ಕವನ ಸಂಕಲನಕ್ಕೆ ವಿಶುಕುಮಾರ್ ಪ್ರಶಸ್ತಿ ಮತ್ತು ಡಿ.ಎಸ್. ಕರ್ಕಿ ಪ್ರಶಸ್ತಿ ಸಂದಿದೆ.