ಶ್ರೀಮತಿ ಹರಿಪ್ರಸಾದ್, ಬಿ.ಎಸ್ಸಿ., ಎಂ.ಎ., (ಸಮಾಜಶಾಸ್ತ್ರ) ಸ್ನಾತಕೋತ್ತರ ಡಿಪ್ಲೊಮಾ (ಇಂಗ್ಲಿಷ್) ಪದವೀಧರರು. ಕೇಂದ್ರ ಆಹಾರ ಸಂಶೋಧನಾಲಯದಲ್ಲಿ ವಿಜ್ಞಾನಿಯಾಗಿ ನಿವೃತ್ತರು. ಬೆಂಗಳೂರಿನಲ್ಲಿ 07-03-1936 ರಲ್ಲಿ ಜನಿಸಿದರು. ತಂದೆ ಕೆ.ಎಸ್. ರಾಜಯ್ಯಂಗಾರ್, ಆರ್. ತಾಯಿ- ಸರೋಜಮ್ಮ.
ವಿಜ್ಞಾನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಪರಿಸರಮಾಲಿನ್ಯ (ಸಹಲೇಖಕಿಯಾಗಿ) 1982, ನೆಹರೂ ಮತ್ತು ವಿಜ್ಞಾನ (ಸಂಪಾದಕಿ: ಕರಾವಿಪ) ಹಸಿರು ಸೊಪ್ಪು-ಪೌಷ್ಟಿಕಾ, ಕುದುಪಲಕ್ಕಿ, ಆಧುನಿಕ ಅಕ್ಕಿ ಗಿರಣಿ, ಜಗದೀಶ್ ಚಂದ್ರಬೋಸ್, ಬಂಕಿಮಚಂದ್ರ (ಅನುವಾದ) ಭಾರತ್ ಭಾರತಿ ಸ್ವರಸಂಪದ (ಜೀವನ ಚರಿತ್ರೆ) 1973 ರಲ್ಲಿ ಕೃತಿಗಳನ್ನು ಪ್ರಕಟಿಸಿದ್ದಾರೆ.
ಆಹಾರ ವಿಜ್ಞಾನ ಸೈನ್ ರಿಪೋರ್ಟರ್ (ವಿಜ್ಞಾನ ವರದಿಗಾರರು) ಬಾಲವಿಜ್ಞಾನ 33 ವರ್ಷ ಕಾಲ, 2006ರಿಂದ ಪ್ರಧಾನ ಸಂಪಾದಕಿಯಾಗಿ , ಸಿಎಫ್‌ಟಿಆರ್‌ಐ ವಾರ್ತಾಪತ್ರವನ್ನು ನಿಭಾಯಿಸಿದ್ಧಾರೆ.
ನಾಟಕ ಅಕಾಡೆಮಿ ಪ್ರಶಸ್ತಿ-2007, ಭಾರತ ಸರ್ಕಾರದ ಎನ್‌ಸಿಎಸ್‌ಟಿಸಿ ಮತ್ತು ಡಿಎಸ್‌ಟಿಯಿಂದ (ವಿಜ್ಞಾನ ಸಂವಹನ ಪ್ರಶಸ್ತಿ) 2008 ರಲ್ಲಿ ಗೌರವ ಪುರಸ್ಕಾರ ನೀಡಲಾಗಿದೆ.