ಡಾ. ಎಸ್.ಎನ್. ಶ್ರೀಧರರವರು ಪ್ರಸ್ತುತ ಚೆನ್ನೈನ ಹಿಂದೂಸ್ತಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ವಿಶ್ವವಿದ್ಯಾನಿಲಯದಲ್ಲಿ ಉಪಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಎಸ್.ಎನ್. ಶ್ರೀಧರರವರು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಎಂ.ಇ. ಮತ್ತು ಪಿ.ಎಚ್.ಡಿ. ಪದವಿಗಳಿಸಿ ಇಂಜಿನಿಯರಿಂಗ್ ವಿದ್ಯಾಸಂಸ್ಥೆಗಳಲ್ಲಿ ಅಧ್ಯಾಪಕ, ಪ್ರೊಫೆಸರ್, ಪ್ರಿನ್ಸಿಪಾಲ್, ಡೈರೆಕ್ಟರ್, ಡೀನ್ ಮತ್ತು ಉಪಕುಲಪತಿಗಳಾಗಿ ಸುಮಾರು 36 ವರ್ಷಗಳ ಸೇವಾ ಅನುಭವ ಹೊಂದಿದ್ದಾರೆ. ತಮ್ಮ ಅಧ್ಯಾಪಕ ವೃತ್ತಿಯ ಜೊತೆಗೆ ಪ್ರವೃತ್ತಿಯಾಗಿ ಕನ್ನಡಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅನೇಕ ಕನ್ನಡ ವೃತ್ತಪತ್ರಿಕೆಗಳಲ್ಲಿ ಮತ್ತು ವಾರ ಪತ್ರಿಕೆಗಳಲ್ಲಿ ಕವಿತೆ, ಕಥೆ, ಹಾಸ್ಯಲೇಖನ, ವಿಚಾರಪ್ರದ ಲೇಖನಗಳನ್ನು ಪ್ರಕಟಿಸಿದ್ದಾರೆ. ಅವರ ಒಂದು ಹಾಸ್ಯ ನಾಟಕವು ಅನೇಕ ಬಾರಿ ಹಲವು ಸಂಘಸಂಸ್ಥೆಗಳಲ್ಲಿ ಮತ್ತು ದೂರದರ್ಶನದಲ್ಲೂ ರಂಗರೂಪದಲ್ಲಿ ಪ್ರದರ್ಶನ ಕಂಡಿದೆ.