ಸಾಗರ ಸಮೀಪದ ಶೆಡ್ತೀಗೆರೆ ಎಂಬ ಹಳ್ಳಿಯಲ್ಲಿ ವಾಸವಾಗಿರುವ ಸಮುದ್ಯತಾ ವೆಂಕಟರಾಮು ಅವರು ಕೃಷಿ ಕುಟುಂಬದ ಗೃಹಿಣಿ. ಬಿ.ಎ ಪದವಿ ಪಡೆದಿರುವ ಇವರು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತರು, ಹವ್ಯಾಸವಾಗಿ ಗಮಕ ವಾಚನ ಕಲೆಯನ್ನು ಅಭ್ಯಾಸಮಾಡಿದವರು. ರಾಜ್ಯಾದ್ಯಂತ ಹಲವಾರು ಗಮಕ ಕಾರ್ಯಕ್ರಮಗಳನ್ನು ನೀಡದ ಅನುಭವ ಇವರಿಗಿದೆ. ‘Forever Forty ಕರ್ನಲ್ ವಸಂತ್’ (ಸುಭಾಷಿಣಿ ವಸಂತ್ ಮತ್ತು ವೀಣಾ ಪ್ರಸಾದ್) ಎಂಬ ಇಂಗ್ಲಿಷ್ ಪುಸ್ತಕದ ಭಾವಾನುವಾದವನ್ನು ಇವರು ಮಾಡಿದ್ದು, ಪ್ರಕಟಗೊಂಡಿದೆ.