About the Author

ಲೇಖಕ ಎಸ್.ಎಂ. ಜನವಾಡಕರ್ (ಶಿವಶರಣಪ್ಪ ಮರಿಲಿಂಗಪ್ಪ ಜನವಾಡಕರ್) ಅವರು ಮೂಲತಃ ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಹಳ್ಳಿ (ಕೆ) ಗ್ರಾಮದವರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಮುಖ್ಯಗುರುಗಳಾಗಿ ನಂತರ ಬೀದರ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಪ್ರಶಿಕ್ಷಕರು, ಜಿಲ್ಲಾ ಶಿಕ್ಷಣ ಉಪನಿರ್ದೇಶಕರ ಕಚೇರಿಯಲ್ಲಿ ವಿಷಯ ಪರಿವೀಕ್ಷಕರು, ಜಿಲ್ಲಾ ಯೋಜನಾ ಸಹಾಯಕ ಸಮನ್ವಯಾಧಿಕಾರಿ, ಸಮಾಜ ಕಲ್ಯಾಣ ತಾಲೂಕು ಅಧಿಕಾರಿ, ಜಿಲ್ಲಾ ಸಾಕ್ಷರತಾ ಸಮಿತಿ ಕಾರ್ಯದರ್ಶಿ ಹೀಗೆ ಕ್ರಿಯಾಶೀಲರಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ 2008 ರಲ್ಲಿ ನಿವೃತ್ತರಾದರು.

ಕೃತಿಗಳು: ಶೀಲತರಂಗ, ಪ್ರಜ್ಞಾತರಂಗ, ಕರುಣಾ ತರಂಗ (ಕವನ ಸಂಕಲನಗಳು) ಧಮ್ಮಾಮೃತ ಗೀತೆ (ಬುದ್ಧನ ಚರಿತ್ರೆ ಕುರಿತ ಕಾವ್ಯ) ಬುದ್ಧ ಗೆದ್ದ ಮಾರನ ಯುದ್ಧ (ನಾಟಕ), ತಥಾಗತ್ ಗಾಥೆಗಳು (ಧಮ್ಮ ಚರಿತ್ರೆ ಕಾವ್ಯ), , ಭಗವಾನ್  ಬುದ್ಧ (ಧ್ವನಿಸುರುಳಿ), ಸೊನ್ನಲಗಿ ಸಿದ್ಧರಾಮನ ಚರಿತೆ, ಶೀಲತರಂಗ, ಹಸಿರು ಕ್ರಾಂತಿ (ನಾಟಕಗಳು)  ಗಾಜಿನ ಬಳೆಚೂರು ನಂಟು ಬಿಡದೆ ಅಂಟಿಕೊಂಡವರು (ಕಾದಂಬರಿ), ಬುದ್ಧ ಮತ್ತು ಬೋಧಿವೃಕ್ಷ, ಧರಿನಾಡಿನ ಬುದ್ಧನ ನೆಲೆಗಳು, ಬಣ್ಣದ ಬದುಕು, ಮಾಸಿದ ಹಾಸಿಗೆ, ಹಿಮಸಾಗರ, ಬೀದರ ಜಾನಪದ ಸಿರಿ, ಕರುಳಿನ ಕತ್ತರಿ, ಕಲ್ಯಾಣ ಕಂಡ ಕಲ್ಯಾಣ, ಕವಲು ದಾರಿಯ ಪಯಣ, ಕಾದ ಕಂಬನಿ ವಿವಿಧ  ಕೃತಿಗಳಾಗಿವೆ. ‘ಬೌದ್ಧಸಿರಿ’ ಎಂಬುದು ಇವರಿಗೆ ಅರ್ಪಿಸಿದ ಅಭಿನಂದನಾ ಗ್ರಂಥ. 

ಪ್ರಶಸ್ತಿ-ಗೌರವಗಳು: ಧಾರವಾಡದ ಪ್ರಬುದ್ಧ ಭಾರತ ನಿರ್ಮಾಣ ಪ್ರತಿಷ್ಠಾನ ಹಾಗೂ ಕರ್ನಾಟಕಜ ಬೌದ್ಧ ಸಾಹಿತ್ಯ ಪರಿಷತ್ ನೀಡುವ ‘ಧಮ್ಮ ಮಹಾಮಾತ್ರ ರಾಷ್ಟ್ರೀಯ ಪ್ರಶಸ್ತಿ, ಮಧ್ಯಪ್ರದೇಶದ ಇಂದೋರ್ ನಿಂದ  ಡಾ. ಬಿ.ಆರ್. ಅಂಬೇಡ್ಕರ್ ರಾಷ್ಟ್ರೀಯ ಸಾಹಿತ್ಯ ರತ್ನ ಪ್ರಶಸ್ತಿ, ನವದೆಹಲಿಯ ದಲಿತ ಸಾಹಿತ್ಯ ಅಕಾಡೆಮಿಯಿಂದ ಭಗವಾನ್ ಬುದ್ಧ ರಾಷ್ಟ್ರೀಯ ಫೆಲೋಷಿಪ್ ಪ್ರಶಸ್ತಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಸುವರ್ಣ ಕರ್ನಾಟಕ ಪ್ರಶಸ್ತಿ, ವಚನ ಸಾಹಿತ್ಯ ಪ್ರಶಸ್ತಿ, ಕನ್ನಡ ರತ್ನ ಪ್ರಶಸ್ತಿ, ಬೀದರ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ. 

 

ಎಸ್.ಎಂ.ಜನವಾಡಕರ್

(03 Jan 1950)