'ಎದೆಗಿಲಕಿ' ಕವನಸಂಕಲನದ ಮೂಲಕ ಸಾಹಿತ್ಯ ಲೋಕದಲ್ಲಿ ಪರಿಚಿತರಾದ ಡಾ. ಎಸ್.ಕೆ. ಮಂಜುನಾಥ್ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಶಿವರ ಗ್ರಾಮದವರು. ಮೈಸೂರು ವಿಶ್ವ ವಿದ್ಯಾಲಯದಿಂದ 'ಹೊಸ ತಲೆಮಾರಿನ ಕನ್ನಡ ಕಾವ್ಯದ ಅಭಿವ್ಯಕ್ತಿ ವಿನ್ಯಾಸಗಳು' ಎಂಬ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ. ಅ.ನ.ಕೃ ಕಥಾ ಬಹುಮಾನ, ಸತತ ಆರು ಬಾರಿ ಕ್ರೈಸ್ಟ್ ಕಾಲೇಜಿನ ದ.ರಾ.ಬೇಂದ್ರೆ ಕಾವ್ಯ ಬಹುಮಾನ, ಸಂಚಯ ಕಾವ್ಯ ಪ್ರಶಸ್ತಿ, ಪ್ರಜಾಪ್ರಗತಿ ದೀಪಾವಳಿ ಕವನ ಸ್ಪರ್ಧೆಯ ಪ್ರಥಮ ಬಹುಮಾನ, ತುಮಕೂರು ಜಿಲ್ಲಾಡಳಿತದ ಸ್ವಾತಂತ್ರೋತ್ಸವ ಕವಿಗೋಷ್ಠಿ ಪ್ರಥಮ ಬಹುಮಾನ, ಮೊದಲ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಾಯಧನ ದೊರಕಿವೆ.
ವಿಮರ್ಶೆ, ಸಂಶೋಧನೆ ಮತ್ತು ಸಾಂಸ್ಕೃತಿಕ ಅಧ್ಯಯನ ಇವರ ಆಸಕ್ತಿಯ ಕ್ಷೇತ್ರಗಳು, ಪೋಟೋ ಗ್ರಫಿ, ಪ್ರವಾಸ ನಲ್ಮೆಯ ಹವ್ಯಾಸಗಳು. 'ಗಸ್ತು ತಿರುಗುವ ಕಾಲ' ಮತ್ತು 'ಕೂಡುದಾರಿ' ವಿಮರ್ಶಾ ಕೃತಿಗಳು ಹಾಗೂ 'ಕಡಿದಷ್ಟು ಕುಡಿಯೊಡೆವ' ಸಂಪದನಾ ಕೃತಿಗಳು ಅಚ್ಚಿನಲ್ಲಿವೆ. ದಶಕದ ತರುವಾಯ 'ಗಾಳಿಯ ಎದೆಸೀಳಿ ಹೊರಟ ಹಕ್ಕಿ' ಎರಡನೆಯ ಸಂಕಲನ ಲುಂಬಿನಿ ಪ್ರಕಾಶನದಿಂದ ಪ್ರಕಟವಾಗಿದೆ.