About the Author

ಸ್ನಾತಕೋತರ ವಿದ್ಯಾರ್ಥಿ ದೆಸೆಯಲ್ಲಿ ಎಡಪಂಥೀಯ ಚಳವಳಿಗೆ ಧುಮುಕಿದ ಎಚ್‌.ಜಿ. ಜಯಲಕ್ಷ್ಮಿಯವರು ಸಕ್ರಿಯ ಹೋರಾಟದಲ್ಲಿ ಮುಳುಗಿ ಎಡಪಕ್ಷವೊಂದರ ಪೂರ್ಣಾವಧಿ ಕಾರ್ಯಕರ್ತರಾಗಿ ಜವಾಬ್ದಾರಿಯನ್ನು ಕೈಗೆತ್ತಿಕೊಂಡವರು. ಮೂವತ್ತೆರಡು ವರ್ಷ ಪೂರ್ಣಾವಧಿ ರಾಜಕೀಯ ಕಾರ್ಯಕರ್ತೆಯಾಗಿ ಕೆಲಸ ಮಾಡಿದ ಜಯಲಕ್ಷ್ಮಿ ಈಗ ಸ್ವತಂತ್ರವಾಗಿ ತಮ್ಮ ಮಾರ್ಕ್ಸವಾದಿ ನಿಲುವುಗಳೊಂದಿಗೆ ಚಳುವಳಿಯಲ್ಲಿ ಭಾಗಿಯಾಗಿದ್ದು, ನಿಯತವಾಗಿ ಲೇಖನಗಳನ್ನೂ ಬರೆಯುತ್ತಿದ್ದಾರೆ. ಈ ಪುಸ್ತಕವಲ್ಲದೆ, ಡೈಸನ್ ಕಾರ್ಟನ್‌ರವರು, ಸೋವಿಯತ್ ಒಕ್ಕೂಟದ ಮಹಿಳಾ ಪರ ನೀತಿಗಳ ಕುರಿತು ಬರೆದ “ಸಿನ್ ಅಂಡ್ ಸೈನ್ಸ್' ಪುಸ್ತಕವನ್ನು, ಕಾರ್ಲ್ ಮಾಕ್ಸ್‌ರವರ ವಿಶ್ವವಿಖ್ಯಾತವಾದ 'ದಾಸ್ ಕ್ಯಾಪಿಟಲ್ ನ ಭಾಗಗಳನ್ನು ಇವರು ಸುಲಲಿತವಾಗಿ ಕನ್ನಡಕ್ಕೆ ತಂದಿದ್ದಾರೆ. ಸಂಗೀತ, ಅದರಲ್ಲೂ ಜನಪರ ಗಾಯನ ಅವರ ಮುಖ್ಯ ಹವ್ಯಾಸ.

ಕೃತಿಗಳು: ಕುಟುಂಬ ಖಾಸಗಿ ಆಸ್ತಿ ಮತ್ತು ಪ್ರಭುತ್ವ

ಎಚ್‌.ಜಿ.ಜಯಲಕ್ಷ್ಮಿ