ಎಸ್. ಬಸವರಾಜ ಹೇರೂರು ಅವರು ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯ ಹೇರೂರಿನವರು. ತಂದೆ ದಿವಂಗತ ವೀರಣ್ಣ ಸಿದ್ದಾಪುರ, ತಾಯಿ ದಿವಂಗತ ಮಲ್ಲಮ್ಮ. ವೃತ್ತಿ ವ್ಯವಸಾಯ. ಸಾಹಿತ್ಯದಲ್ಲಿ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯಿದ್ದು ತಾಲೂಕ ಸಿರಿಗನ್ನಡ ವೇದಿಕೆ ಗಂಗಾವತಿಯ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ ಮರಳಿ ಹೋಬಳಿಯ ನಿಕಟಪೂರ್ವ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.