ಲೇಖಕ ರಮೇಶ ದೊಡ್ಡಪುರ ಅವರು ಹಾಸನ ಜಿಲ್ಲೆಯ ದೊಡ್ಡಪುರ ಗ್ರಾಮದವರು. ಬೆಂಗಳೂರಿನ ವಿಶ್ವವಿದ್ಯಾಲಯದ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ(ಯುವಿಸಿಇ) ಮೆಕ್ಯಾನಿಕಲ್ ಇಂಜಿನಿಯರಿಂಗ್ ಕಲಿಯುತ್ತಿರುವಾಗ ಪತ್ರಿಕೋದ್ಯಮದೆಡೆಗೆ ಆಕರ್ಷಣೆ. ಸ್ನಾತಕೋತ್ತರ ಡಿಪ್ಲೊಮಾ. ಎರಡು ವರ್ಷ ರಾಷ್ಟ್ರೋತ್ಥಾನ ರಿಸರ್ಚ್ ಫೌಂಡೇಷನ್ನಲ್ಲಿ ಸಂಶೋಧನಾ ಸಹಾಯಕರಾಗಿ ಕೆಲಸ ಮಾಡಿದರು. ಪಂಡಿತ್ ದೀನದಯಾಳ್ ಉಪಾಧ್ಯಾಯ ಸಮಗ್ರ ಬರಹ ಸಂಪುಟದ ಕಾರ್ಯ ಸಲುವಾಗಿ ನವದೆಹಲಿ, ಮಧ್ಯಪ್ರದೇಶ ಮುಂತಾದೆಡೆ ಸಂಚರಿಸಿ ಮೂಲ ಧಾತು ಸಂಗ್ರಹಣೆ. 2012ರಲ್ಲಿ ‘ವಿಜಯವಾಣಿ’ ದಿನಪತ್ರಿಕೆ ಸೇರ್ಪಡೆಯಾಗಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಣೆ. ಪ್ರಸ್ತುತ ಜನರಲ್ ವರದಿಗಾರಿಕೆ ವಿಭಾಗದ ಉಪ ಮುಖ್ಯ ವರದಿಗಾರರು. ರಾಜ್ಯ ರಾಜಕಾರಣದ ಒಂದು ದಶಕದ, ವಿಶಿಷ್ಠವಾಗಿ 2018ರ ವಿಧಾನಸಭೆ ಹಾಗೂ 2019ರ ಲೋಕಸಭೆ ಚುನಾವಣೆಗಳನ್ನು ವರದಿಗಾರನ ಕಣ್ಣಲ್ಲಿ ಕಂಡಂತೆ ಚಿತ್ರಿಸಿರುವ ಇವರದು ‘ಬಿಜೆಪಿ 25+1’ ಎಂಬುದು 2020ರಲ್ಲಿ ಪ್ರಕಟವಾದ ಮೊದಲ ಕೃತಿ.