ಪಂಜು ಗಂಗೊಳ್ಳಿ ಅವರು 1962ರ ಆಗಸ್ಟ್ 01ರಂದು ಕುಂದಾಪುರದ ಗಂಗೊಳ್ಳಿಯಲ್ಲಿ ಜನಿಸಿದರು. ಪ್ರಸ್ತುತ ಮುಂಬೈನಲ್ಲಿ ವಾಸ. ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಿಎಸ್.ಸಿ. ಪೂರೈಸಿ, ಮುಂಗಾರು ದಿನಪತ್ರಿಕೆಯಲ್ಲಿ ಕಾರ್ಟೂನಿಸ್ಟ್ ಆಗಿ ಪತ್ರಿಕೋದ್ಯಮಕ್ಕೆ ಕಾಲಿಟ್ಟರು. 'ಲಂಕೇಶ್ ಪತ್ರಿಕೆ'ಯಲ್ಲಿ ಕೆಲವು ವರ್ಷಗಳ ಕಾಲ ಕಾರ್ಟೂನಿಸ್ಟ್ ಆಗಿದ್ದರು. ಬಳಿಕ ಪ್ರೀತೀಶ್ ನಂದಿ ಸಂಪಾದಕತ್ವದ 'ದಿ ಸಂಡೇ ಆಬ್ಬರ್ವರ್' ಪತ್ರಿಕೆಯ ಮೂಲಕ ಇಂಗ್ಲಿಷ್ ಪತ್ರಿಕೋದ್ಯಮ ಪ್ರವೇಶಿಸಿದರು. ಕಳೆದ 20ವರ್ಷಗಳಿಂದ 'ಬ್ಯುಸಿನೆಸ್ ಇಂಡಿಯಾ' ಪತ್ರಿಕೆಯಲ್ಲಿ ಕಾರ್ಟೂನಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಂಜು ಗಂಗೊಳ್ಳಿ ಅವರಿಗೆ ಆನುವಂಶಿಕವಾಗಿ ಬಂದ ಚಿತ್ರಕಲೆ ವೃತ್ತಿಯಾದರೆ, ಬರವಣಿಗೆ ಪ್ರವೃತ್ತಿ. 'ಮೂಢನಂಬಿಕೆಗಳ ವಿಶ್ವರೂಪ', 'ರುಜು' ಇವರ ಪ್ರಕಟಿತ ಕೃತಿಗಳು, ಸ್ನೇಹಿತರನ್ನು ಒಗ್ಗೂಡಿಸಿಕೊಂಡು ಕಳೆದ 20 ವರ್ಷಗಳಿಂದ ರಚಿಸುತ್ತಿರುವ ಕುಂದಾಪು ಕನ್ನಡ ನಿಘಂಟು ಈಗ ಬಿಡುಗಡೆಗೆ ಸಿದ್ಧವಾಗಿದ್ದರೆ, ‘ಕುಂದಾಪು ಕನ್ನಡ ಹಾಡುಗಳು' ತಯಾರಿಯ ಹಂತದಲ್ಲಿದೆ.