ಹೊಸ ತಲೆಮಾರಿನ ಸಾಹಿತ್ಯ-ಸಂಸ್ಕೃತಿ ಸಂಶೋಧಕರಲ್ಲಿ ಪಂಡಿತ ಕೆ. ರಾಠೋಡ ಪ್ರಮುಖರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಹಾಯಕ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ‘ಡಂಬಳ ಶಾಸನಗಳ ಸಾಂಸ್ಕತಿಕ ಅಧ್ಯಯನ, ಪ್ರಾಚೀನ ಕನ್ನಡ ಕಾವ್ಯ ಮತ್ತು ಶಾಸನಗಳಲ್ಲಿ ಸ್ಥಳೀಯ ಸಂಸ್ಕತಿ, ಜನಪದ ತರಂಗ, ಹೇಮರಡ್ಡಿ ಮಲ್ಲಮ್ಮನ ಚರಿತ್ರೆ, ಎಕ್ಕೋಟಿ ಜಿನಾಲಯಗಳು’ ಅವರ ಪ್ರಮುಖ ಕೃತಿಗಳು