ಪಾಲಾಕ್ಷಪ್ಪ ಎಸ್.ಎನ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ತಡಸನಹಳ್ಳಿಯವರು . ಪ್ರಸ್ತುತ್ತ ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ವಾಸ. ವೃತ್ತಿಯಲ್ಲಿ ಪ್ರೌಢಶಾಲಾ ಶಿಕ್ಷಕ. ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದಿಂದ ಬಿ.ಎ. ಮತ್ತು ಎಂ.ಎ. ಪದವಿ (ಇತಿಹಾಸ), ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಇಡಿ. ಪದವಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರಿನಿಂದ ಎಂ.ಎ. (ಕನ್ನಡ) ಮತ್ತು ಎಂ.ಇಡಿ. ಪದವಿ ಪಡೆದಿದ್ದಾರೆ. ಓದುವುದು, ಬರೆಯುವುದು, ಆಶುಭಾಷಣ, ನಾಟಕಾಭಿನಯ, ಪ್ರವಾಸ ಮುಂತಾದವುಗಳು ಹವ್ಯಾಸವಾಗಿದೆ.
ಪ್ರಶಸ್ತಿ- ಕಾವ್ಯಶ್ರೀ ಪುರಸ್ಕಾರ (2017), ಉತ್ತಮ ಪ್ರೌಢಶಾಲಾ ಶಿಕ್ಷಕ ಪುರಸ್ಕಾರ (2019)