About the Author

ಪಾಲಗುಮ್ಮಿ ಸಾಯಿನಾಥ್ (ಪಿ. ಸಾಯಿನಾಥ) ಪ್ರಸ್ತುತ ದಿ ಹಿಂದು ಪತ್ರಿಕೆಯ ಗ್ರಾಮೀಣ ವಿಷಯಗಳ ಸಂಪಾದಕರು. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್ ಯು) ದಿಂದ ಚರಿತ್ರೆಯಲ್ಲಿ ಸ್ನಾತಕೋತ್ತರ ಪದವೀಧರರು. ಪತ್ರಿಕೋದ್ಯಮಕ್ಕೆ. ಯು ಎನ್ ಐ ಸುದ್ದಿ ಸಂಸ್ಥೆ ದಿ ಡೈಲಿ ಪತ್ರಿಕೆಯ ವಿದೇಶ ಸಂಪಾದಕ. ಬ್ಲಿಟ್ಸ್ ನ ಉಪ ಸಂಪಾದಕರಾಗಿದ್ದರು. ಗ್ರಾಮೀಣ ಬಡತನದ ಬಗ್ಗೆ ಬರೆಯಲು ಹಳ್ಳಿಗಳತ್ತ ನಡೆದರು. ಟೈಮ್ಸ್ ಆಫ್ ಇಂಡಿಯಾ ಫೆಲೋಶಿಪ್ ಈ ಸುತ್ತಾಟಕ್ಕೆ ಪ್ರೋತ್ಸಾಹ ನೀಡಿತ್ತು.  ಗ್ರಾಮೀಣ ಬಡತನದ ಕುರಿತ ವರದಿಗಳು ಸಾಯಿನಾಥ್ ಅವರಿಗೆ ಇನ್ನಷ್ಟು ಫೆಲೋಶಿಪ್ ಹಾಗೂ 13 ಪ್ರಶಸ್ತಿಗಳನ್ನು ತಂದುಕೊಟ್ಟಿತು. 

ಸಾಯಿನಾಥ್ ಭಾರತ, ಕೆನಡಾ, ಅಮೆರಿಕಾದ ಹಲವು ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮ, ಅಭಿವೃದ್ಧಿ ಹಾಗೂ ರಾಜಕೀಯ ವಿಷಯಗಳ ಸಂದರ್ಶಕ ಪ್ರಾಧ್ಯಾಪಕರು. ಪ್ರತಿಷ್ಠಿತ ಮ್ಯಾಗ್ಸೇಸೆ ಹಾಗೂ ಯುರೋಪಿಯನ್ ಕಮಿಷನ್ ನ ಪತ್ರಿಕೋದ್ಯಮ ಪ್ರಶಸ್ತಿಯನ್ನು ಪಡೆದಿದ್ದಾರೆ. Everybody loves a good drought ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ಅವರ ಈ ಕೃತಿಯನ್ನು ಪತ್ರಕರ್ತ ಜಿ.ಎನ್.ಮೋಹನ್ ಅವರು ‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಎಂಬ ಹೆಸರಿನಲ್ಲಿ ಕನ್ನಡೀಕರಿಸಿದ್ದಾರೆ. ಪತ್ರಿಕೋದ್ಯಮ ಅಧಃಪತನದ ದಾರಿ ಹಿಡಿಯುತ್ತಿರುವ ಹೊತ್ತಿನಲ್ಲಿ ಪತ್ರಕರ್ತನಾದವನು ಮಾಡಲೇ ಬೇಕಾದ  ಸೂಕ್ಷ್ಮ ಕಾರ್ಯಗಳನ್ನು ಪ್ರಜ್ಞಾಪೂರ್ವಕವಾಗಿ ನಿರ್ವಹಿಸುತ್ತಿರುವ ಕೆಲವೇ ಕೆಲವು ಪ್ರಬುದ್ಧ ಪತ್ರಕರ್ತರಲ್ಲಿ ಪಿ. ಸಾಯಿನಾಥ್ ಕೂಡಾ ಒಬ್ಬರು. 

ಪಿ.ಸಾಯಿನಾಥ್