About the Author

ಮಲೆನಾಡಿನ ಪುಟ್ಟ ಊರಿನಿಂದ ಬಂದು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ರಾಜಕೀಯ ನಾಯಕಿ. ಹುಟ್ಟಿದ್ದು 1951ರ ಮಾರ್ಚ್‌ 20ರಂದು, ಮೂಡಿಗೆರೆಯ ಮಗ್ಗಲಮಕ್ಕಿಯಲ್ಲಿ. ಎಂಎ ಪದವಿಧರರಾಗಿರುವ ಮೋಟಮ್ಮ, 1978 ರಿಂದ 1983 ರವರೆಗೆ, 1989 ರಿಂದ 1994 ರವರೆಗೆ, 1999 ರಿಂದ 2004 ರವರೆಗೆ ರಾಜ್ಯ ವಿಧಾನಸಭಾ ಸದಸ್ಯರಾದವರು. 1999 ರಿಂದ 2004 ರವರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆಯಾಗಿ ಸೇವೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಾಡುವ, ಓದುವ ಹವ್ಯಾಸವಿರುವ ಮೋಟಮ್ಮ ಅವರಿಗೆ ಕ್ರೀಡಾ ಕ್ಷೇತ್ರದಲ್ಲಿಯೂ ಆಸಕ್ತಿ. ಇದೀಗ ಬಿದಿರು ನೀನ್ಯಾರಿಗಲ್ಲದವಳು” ಎಂಬ ಹೆಸರಿನಲ್ಲಿ ತಮ್ಮ ಆತ್ಮಕತೆಯನ್ನು ಬರೆಯುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲೂ ಗುರುತು ಮೂಡಿಸಿದ್ದಾರೆ. ಅವರ ಆತ್ಮಕಥನ ಮಹಿಳೆಯರಿಗೆ ಸ್ಫೂರ್ತಿದಾಯಕ ಎಂದೇ ಎಸ್ ಎಂ ಕೃಷ್ಣ ಅವರಮಥ ಹಿರಿಯ ನಾಯಕರು ಮೆಚ್ಚಿದ್ದಾರೆ.

ಮೋಟಮ್ಮ