ಡಾ. ಮೋಹನ್ ದಾಸ್ ರವರು ಅನಕ್ಷರಸ್ಥ ಕುಟುಂಬಕ್ಕೆ ಸೇರಿದ ಬಡ ಕುಟುಂಬದಲ್ಲಿ ಜನಿಸಿದ್ದು, ಸ್ನಾತಕೋತ್ತರ ಮತ್ತು ಪಿಎಚ್.ಡಿ ಪದವಿ ಪಡೆದಿದ್ಧಾರೆ. ಸುಮಾರು 12 ವರ್ಷಗಳ ಕಾಲ ಮನಃಶಾಸ್ತ್ರಜ್ಞರ ತಂಡದಲ್ಲಿ ವೃತ್ತಿ ಸಲಹೆ ಮತ್ತು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿ ವಿದ್ಯಾರ್ಥಿಗಳಿಗೆ ಪೂರಕ ಸಲಹೆ ಮತ್ತು ಮಾರ್ಗದರ್ಶನ ನೀಡುವ ಕ್ಷೇತ್ರದಲ್ಲಿ ಪರಿಣಿತರಾಗಿದ್ದಾರೆ. ಪ್ರಸ್ತುತ ಶಿಕ್ಷಣ ಇಲಾಖೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸುತ್ತಿದ್ದು, ಇಂದಿನ ಯುವ ಜನತೆಯ ವೃತ್ತಿ ಬದುಕಿಗೆ ಆಸರೆಯಾಗುವಂತಹ “ಭಾರತೀಯ ಹಿನ್ನಲೆಯಲ್ಲಿ: ವೃತ್ತಿ ಮಾಹಿತಿ ಕೈಪಿಡಿ” ಎಂಬ ಇವರ ಕೃತಿ ಕನ್ನಡ ಮತ್ತು ಇಂಗೀಷ್ ಭಾಷೆಗಳಲ್ಲಿ ಮೊದಲ ಆವೃತಿ (ಕೃತಿ) ಯಾಗಿದೆ. ಅವರಿಗೆ ಉತ್ತಮ ವೃತ್ತಿ ಸಲಹೆ ಮತ್ತು ಮಾರ್ಗದರ್ಶಕರೆಂದು ಪ್ರಶಸ್ತಿ ದೊರೆತಿದೆ.