ಲೇಖಕಿ ಮಾಯಾ.ಬಿ.ನಾಯರ್ ಅವರು ಮೂಲತಃ ಕೇರಳ ರಾಜ್ಯದ ಕೊಟ್ಟಾಯಂ ಜಿಲ್ಲೆಯ ಕಾಜಿರಪ್ಪಳ್ಳಿ ತಾಲ್ಲೂಕಿನ ತಂಬಲಕ್ಕಾಡ್ ಗ್ರಾಮದವರು. ಡಿ.ಸಿಪಿ, ಬಿ.ಕಾಂ. ಎಂ.ಎ (ಸಮಾಜಶಾಸ್ತ್ರ), ಎಂ.ಎ (ಗ್ರಾಮೀಣಾಭಿವೃದ್ದಿ), ಎಂ.ಎ(ಪಬ್ಲಿಕ್ ಅಡ್ಮಿನಿಸ್ಟ್ರೇಷನ್), ಹಿಂದಿ (ರಾಷ್ಟಭಾಷಾ) ಪದವೀಧರರು. ತಂದೆ ಎ.ಆರ್. ಭಾಸ್ಕರನ್ ನಾಯರ್, ತಾಯಿ ಇಂದಿರಾ ದೇವಿ. ಕರ್ನಾಟಕದ ಜಿಲ್ಲಾ ಪಂಚಾಯತ್, ಸಚಿವಾಲಯ, ಉಪ ಮುಖ್ಯಮಂತ್ರಿಗಳ ಸಚಿವಾಲಯಗಳಲ್ಲಿ ಹಿರಿಯ ಅಧಿಕಾರಿಗಳ ಆಪ್ತಸಹಾಯಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ, ಕಾವೇರಿ ನೀರಾವರಿ ನಿಗಮ ನಿಯಮಿತ, ವ್ಯವಸ್ಥಾಪಕ ನಿರ್ದೆಶಕರ ಆಪ್ತ ಕಾರ್ಯದರ್ಶಿ (ಬೆಂಗಳೂರು) ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕೃತಿಗಳು: ಶ್ರೀ ಇನ್ನಸೆಂಟ್, ಮಲಯಾಳ ಚಿತ್ರರಂಗದ ಹಾಸ್ಯ ಸಾಮ್ರಾಟ ಹಾಗೂ ಮಾಜಿ ಸಂಸದರು, ಸಾವಿನ ಮನೆಯ ಕದವ ತಟ್ಟಿ( ಮಳೆಯಾಳಂ ಕೃತಿಯ ಕನ್ನಡಾನುವಾದ), ಕನ್ನಂಬಾಡಿಯ ಚಿಣ್ಣರು( ಅನುವಾದ), ಅಜ್ಜ ಹೇಳಿದ’ ಸಣ್ಣ ಕತೆ (ಅನುವಾದಿತ ಕೃತಿ) ಮಯೂರ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ.