ಉಡುಪಿಯ ವಿದ್ವತ್ ಪರಂಪರೆಯ ಬಹುಮುಖ್ಯ ಕೊಂಡಿಯಾಗಿದ್ದ ಸಾಹಿತಿ, ವಿದ್ವಾಂಸ ರಾಜಗೋಪಾಲ ಆಚಾರ್ಯರು 1926ರಲ್ಲಿ ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಸಂಸ್ಕೃತದಲ್ಲಿ ಸಾಹಿತ್ಯ ಶಿರೋಮಣಿ ಹಾಗೂ ವಿದ್ವಾನ್ ಪದವಿಗಳನ್ನು ಪಡೆದು ಉಡುಪಿಯ ಸಂಸ್ಕೃತ ಮಹಾವಿದ್ಯಾಲಯ ದಲ್ಲಿ ಅಧ್ಯಾಪಕರಾಗಿದ್ದರು. ಬಾಲ್ಯದಿಂದಲು ಸಾಹಿತ್ಯ ಸಂಗೀತದಲ್ಲಿ ಅತ್ಯಂತ ಆಸ್ಥೆ ಉಳ್ಳವರು.
ಅವರು ಕನ್ನಡ ಮತ್ತು ಸಂಸ್ಕೃತದಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ‘ಕವಿ ವರ ಮುದ್ದಣ’ ಅವರ ಅತ್ಯುನ್ನತ ಕೃತಿಗಳಲ್ಲೊಂದು.