ಬರಹಗಾರ ಕುಮಾರ ಅಂಕನಹಳ್ಳಿ ಅವರು 1967 ಮೇ 12ರಂದು ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲ್ಲೂಕಿನ ಅಂಕನಹಳ್ಳಿಯಲ್ಲಿ ಜನಿಸಿದರು. ತಾಯಿ ಲಕ್ಷ್ಮಮ್ಮ, ತಂದೆ ಗಂಗಾಧರ ಗೌಡ. ಎಸ್.ಎಸ್.ಎಲ್.ಸಿ ಶಿಕ್ಷಣವನ್ನು ಕೆ.ಆರ್. ನಗರದಲ್ಲಿ ಪಡೆದ ಇವರು ಸರ್ಕಾರಿ ಶಾಲಾ ಶಿಕ್ಷಕರಾಗಿ ವೃತ್ತಿ ಆರಂಭಿಸಿದರು. ನಂತರ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಸ್ತುತ ನಂಜನಗೂಡು ತಾಲ್ಲೂಕಿನ ಕೊಡಿಯಾಲದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಭಾಷಾ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಪ್ರಿಯರು ಆಗಿರುವ ಇವರು ಮಂಟೆಸ್ವಾಮಿ ಸಂಘರ್ಷ, ಕಪ್ಪಾಡಿ ರಾಜಪ್ಪಾಜಿ, ಹೆಗ್ಗಡದೇವನ ಕೋಟೆ ಜೇನು ಕುರುಬರು, ಬಯಲಾದ ಹಂಪಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.