ಕವಯತ್ರಿ ಕುಲಶೇಖರಿ ಅವರು ಜನಿಸಿದ್ದು 1939 ಸೆಪ್ಟೆಂಬರ್ 8ರಂದು. ಹುಟ್ಟೂರು ದಾವಣಗೆರೆ. ತಂದೆ ಕೆ.ಎಫ್.ಪಾಟೀಲ, ತಾಯಿ ಶಾಂತಮ್ಮ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ.
ಇವರು ಬರೆದ ಕೃತಿಗಳೆಂದರೆ ಕ್ಷಿತಿಜ, ಸಂಕಲ್ಪ, ಬಿಕ್ಕುಗಳು. ನಮ್ಮ ಲೇಖಕಿಯರು, ಪಾಕವೈವಿಧ್ಯ (ಸಂಪದನೆ). ಸಂಕಲ್ಪ, ಈ ಶತಮಾನದ ಕನ್ನಡ ಕವಯಿತ್ರಿಯರು ಮುಂತಾದವು. ಇವರ ಸಂಕಲ್ಪ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಲಭಿಸಿದೆ. ಇವರಿಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದಿಂದ ಪ್ರಶಸ್ತಿ, ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ, ಅನುಪಮಾ ನಿರಂಜನ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜದೇವಿ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ದೊರೆತಿವೆ.