ವಕೀಲರಾಗಿರುವ ಸ್ತ್ರೀವಾದಿ ಚಿಂತಕಿ ಹೇಮಲತಾ ಮಹಿಷಿ ಅವರು ಜನಿಸಿದ್ದು 1944 ನವೆಂಬರ್ 23ರಂದು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು, ಹೈಕೋರ್ಟ್‌ನ ನ್ಯಾಯವಾದಿಗಳ ಸಂಘದ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಹಿಳೆ ಮತ್ತು ಕಾನೂನು ಕುರಿತಂತೆ ಹಲವಾರು ಕೃತಿಗಳನ್ನು ಬರೆದಿದ್ದಾರೆ. ಕಾನೂನು ಮತ್ತು ಮಹಿಳೆ, ಹಿಂದೂ ವಿವಾಹ ಕಾನೂನು ಮತ್ತು ಮಹಿಳೆ, 21ನೇ ಶತಮಾನದ ಮಹಿಳೆ, ಮಹಿಳೆ ಮತ್ತು ಆಸ್ತಿಹಕ್ಕುಗಳು, ಮಾನವ ಹಕ್ಕುಗಳು, ಸಬಲೆ-ಸಲಹೆ ಇವರ ಪ್ರಮುಖ ಕೃತಿಗಳಾಗಿವೆ.